ಕೊರೊನಾಗೆ ಹಿರಿಯ ಮರಾಠಿ ನಟಿ ನಿಧನ

ಬೆಂಗಳೂರು, ಸೆಪ್ಟೆಂಬರ್ 22, 2020 (www.justkannada.in): ಹಿರಿಯ ಮರಾಠಿ ನಟಿ ಆಶಾಲತಾ ವಬ್‌ಗಾಂವಕರ್ ಅವರು ಇಂದು ನಿಧನ ಹೊಂದಿದ್ದಾರೆ.

ಆಶಾಲತಾ ವಬ್‌ಗಾಂವಕರ್ ಟಿವಿ ಧಾರಾವಾಹಿ ಚಿತ್ರೀಕರಣಕ್ಕಾಗಿ ಸತಾರಾಗೆ ಬಂದಿದ್ದರು. ಸೆಟ್‌ನಲ್ಲಿ 20 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು.

ಸತಾರಾದಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಾಲತಾ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.

ಅವರು ಮಂಗಳವಾರ ಬೆಳಿಗ್ಗೆ 4:45 ರ ವೇಳೆಗೆ ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.