ಸೋಷಿಯಲ್ ಮೀಡಿಯಾದಲ್ಲಿ ‘ಒಡೆಯ’ನ ಟೈಟಲ್ ಸಾಂಗ್ ಹವಾ !

ಬೆಂಗಳೂರು, ನವೆಂಬರ್ 08, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್​ ಅಭಿನಯದ ಒಡೆಯ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿತ್ತು. ಇದೀಗ ಚಿತ್ರದ ಟೈಟಲ್ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ದರ್ಶನ್​​​ಗೆ ಚಕ್ರವರ್ತಿ ರೀತಿಯ ಸೂಪರ್ ಹಿಟ್ ಆಲ್ಬಮ್​ ಕೊಟ್ಟ ಅರ್ಜುನ್​ ಜನ್ಯಾ ಈ ಚಿತ್ರಕ್ಕೂ ಟ್ಯೂನ್​ ಹಾಕ್ತಿದ್ದಾರೆ.

‘ಹೇ ಒಡೆಯ’ ಅಂತ ಶುರುವಾಗೋ ಟೈಟಲ್​ ಸಾಂಗ್ ರಿಲೀಸ್​ ಆಗಿದೆ. ಚಕ್ರವರ್ತಿ ಟೈಟಲ್​ ಸಾಂಗ್​ಗೆ ಕೆಲಸ ಮಾಡಿದ್ದ ಜನ್ಯಾ, ವಿ. ನಾಗೇಂದ್ರ ಪ್ರಸಾದ್​ ಮತ್ತು ವ್ಯಾಸರಾಜ್ ಗಾಯನದಲ್ಲಿ ಮೂಡಿ ಬಂದಿರೋ ಹಾಡು ಇದಾಗಿದೆ.