ಯು ಟ್ಯೂಬ್’ ಟ್ರೆಂಡಿಂಗ್ ‘ಒಡೆಯ’ ಚಾಲೆಂಜಿಂಗ್ ಸ್ಟಾರ್

Promotion

ಬೆಂಗಳೂರು, ನವೆಂಬರ್ 02, 2019 (www.justkannada.in): ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಒಡೆಯ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಬಿಡುಗಡೆಯಾದ 24 ಗಂಟೆಯೊಳಗೆ ಯೂ ಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನದಲ್ಲಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹವಾ ಮತ್ತೆ ರುಜುವಾತಾಗಿದೆ.

ಎಂ.ಡಿ. ಶ್ರೀಧರ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ದರ್ಶನ್ ಜತೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ.  ತಮಿಳಿನ ‘ವೀರಂ’ ಚಿತ್ರದ ರಿಮೇಕ್ ಆಗಿರುವ ‘ಒಡೆಯ’ ಚಿತ್ರದಲ್ಲಿ ಸಾಹಸದ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇದೆ.