ದಚ್ಚು ಕರೆಗೆ ಒಗ್ಗಟ್ಟು ಅಭಿಮಾನಿಗಳು ತಂದಿದ್ದು ರಾಶಿ ರಾಶಿ ಅಕ್ಕಿ, ಬೇಳೆ, ದವಸಧಾನ್ಯ !

Promotion

ಬೆಂಗಳೂರು, ಫೆಬ್ರವರಿ 19, 2020 (www.justkannada.in): ಕಳೆದ ವರ್ಷದಂತೆ ಈ ವರ್ಷವೂ ಕೂಡ ದರ್ಶನ್ ಅವರ ಮನವಿಗೆ ಓಗೊಟ್ಟು ಉಡುಗೊರೆ ಬದಲಾಗಿ ಅಕ್ಕಿ, ಬೇಳೆ, ಧವಸಧಾನ್ಯಗಳನ್ನು ಡಿ ಫ್ಯಾನ್ಸ್ ಕೊಟ್ಟಿದ್ದಾರೆ.

ಇದಕ್ಕೆ ದರ್ಶನ್​ ಕೂಡ ಟ್ವಿಟ್​ ಮಾಡಿ ಪ್ರತಿಕ್ರಿಯಿಸಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಸಹ ನನ್ನ ಕೋರಿಕೆಗೆ ಬೆಲೆಕೊಟ್ಟು ಹುಟ್ಟುಹಬ್ಬವನ್ನು ಅರ್ಥಪೂರ್ಣ ಆಚರಣೆಗಾಗಿ ಸ್ಪಂದಿಸಿದ ಅಭಿಮಾನಿ ಬಳಗಕ್ಕೆ ದರ್ಶನ್​ ಅವರು ತಮ್ಮ ಟ್ವಿಟರ್​​ನಲ್ಲಿ ಧನ್ಯವಾದಗಳು ತಿಳಿಸಿದ್ದಾರೆ.

ಅಭಿಮಾನಿಗಳ ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಬೆಲೆಕಟ್ಟಲು ಎಂದು ಸಾಧ್ಯವಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ಬಂದು ಹರಸಿ, ಆಶೀರ್ವದಿಸಿ ಹೋಗಿರುವ ನಿಮ್ಮ ನಿಷ್ಕಲ್ಮಶ ಪ್ರೀತಿ-ಅಭಿಮಾನಕ್ಕೆ ನಾನೆಂದು ಧಕ್ಕೆ ತರುವುದಿಲ್ಲ. ನಿಮ್ಮ ಈ ಪ್ರೀತಿಗೆ ದಾಸ ಸದಾ ಚಿರಋಣಿ ಎಂದು ಹೇಳಿದ್ದಾರೆ.