ಮಿಸ್ಟರ್ ನ್ಯಾಗ್ಸ್ ವೆಡ್ಸ್ ಅನ್ಯ! ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಾನೀಶ್

Promotion

ಬೆಂಗಳೂರು, ಜೂನ್ 11, 2021 (www.justkannada.in): ಆರ್‌ಸಿಬಿಯ ಮಿಸ್ಟರ್ ನ್ಯಾಗ್ಸ್, ನಟ ದಾನೀಶ್ ಸೇಠ್ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ಹಲವು ವರ್ಷಗಳ ಗೆಳತಿ ಅನ್ಯ ರಂಗಸ್ವಾಮಿ ಅವರನ್ನು ವರಿಸಿದ್ದಾರೆ ದಾನೀಶ್. ಅನ್ಯ ರಂಗಸ್ವಾಮಿ ಕೂಡ ಬೆಂಗಳೂರಿನವರೇ ಆಗಿದ್ದು ಮುಂಬೈನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಕಳೆದ ವರ್ಷದ ಡಿಸೆಂಬರ್ ಸಮಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ.

ಈ ವಿಷಯವನ್ನು ದಾನೀಶ್ ಸೇಠ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನವ ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.