ಸಂಗೀತ ವಿವಿಗೆ ಯುಜಿಸಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿ ಪ್ರೊ. ಡಿ.ಶಿವಲಿಂಗಯ್ಯ ನೇಮಕ

Promotion

ಬೆಂಗಳೂರು, ಜೂನ್ 12, 2021 (www.justkannada.in): ಮೈಸೂರಿನ ಗಂಗೂಬಾಯಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಯುಜಿಸಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿ ಪ್ರೊ.ಡಿ.ಶಿವಲಿಂಗಯ್ಯ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಯುಸಿಜಿ ಕಾರ್ಯದರ್ಶಿ ಉಮಾಕಾಂತ್ ಬಲುನಿ, ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ  ಪ್ರೊ.ಡಿ.ಶಿವಲಿಂಗಯ್ಯ ಅವರನ್ನು ಸಂಗೀತ ವಿವಿ ಯುಸಿಜಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಈ ಮೊದಲು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದ ಪ್ರೊ.ಡಿ.ಶಿವಲಿಂಗಯ್ಯ ಅವರು ಅದಕ್ಕೂ ಮೊದಲು ಮಂಗಳೂರು ವಿವಿ ಪರೀಕ್ಷಾಂಗ ರಿಜಿಸ್ಟ್ರರ್ ಆಗಿ ತುಮಕೂರು ವಿವಿ ಆಡಳಿತ ರಿಜಿಸ್ಟ್ರರ್ ಆಗಿಯೂ ಕಾರ್ಯನಿರ್ವಹಿಸಿದ್ದರು.