“ಸದ್ಯ ಸಿ.ಎಂ.ಕುರ್ಚಿ ಖಾಲಿ ಇಲ್ಲ” : ಸಚಿವ ಜಗದೀಶ ಶೆಟ್ಟರ್

Promotion

ಬೆಂಗಳೂರು,ಜನವರಿ,13,2021(www.justkannada.in) : ಕೆಲವರು ವಿನಾಕಾರಣ ಏನೇನೋ ಸುದ್ದಿ ಹರಡಿಸುತ್ತಿದ್ದು, ಮೂರ್ನಾಲ್ಕು ತಿಂಗಳಿಂದ ಸಿ.ಎಂ. ಬದಲಾಗುತ್ತಾರೆ ಎನ್ನುವ ಚರ್ಚೆಯೂ ನಡೆಯುತ್ತಿದೆಆದರೆ, ಸದ್ಯ ಸಿ.ಎಂ.ಕುರ್ಚಿ ಖಾಲಿ ಇಲ್ಲ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಎಂದು ಹೇಳಿದ್ದಾರೆ.

jk-logo-justkannada-mysore

ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದಿರುವುದಕ್ಕೆ ಕೆಲವರಿಗೆ ಅಸಮಾಧಾನ ಇರುವುದು ನಿಜ. ನನ್ನ ಖಾತೆ ಬದಲಿಸುವ ವಿಚಾರ ನನಗೆ ಗೊತ್ತಿಲ್ಲ. ಕೆಲವರು ವಿನಾಕಾರಣ ಏನೇನೋ ಸುದ್ದಿ ಹರಡಿಸುತ್ತಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಕೈಬಿಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಬರುತ್ತಿದೆ. ಆದರೆ, ವಾಸ್ತವ ಹಾಗಿಲ್ಲ ಎಂದರು.

Currently,C.M.chair,Empty,No,Minister,Jagadish Shettar

 ಯಾರಿಗೆ ಯಾವುದೇ ರೀತಿಯ ಅಸಮಾಧಾನವಿದ್ದರೂ ಬಹಿರಂಗ ಹೇಳಿಕೆ ಕೊಡಬಾರದು. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

 

key words : Currently-C.M.chair-Empty-No-Minister-Jagadish Shettar