ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ: ದಾಖಲೆ ಬಿಡುಗಡೆ ಮಾಡುವೆ ಎಂದ ಹೆಚ್.ಡಿ ರೇವಣ್ಣ.

Promotion

ಹಾಸನ,ಜೂನ್,5,2021(www.justkannada.in): ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ ಮಾಡಲಾಗಿದೆ.  ಈ ಬಗ್ಗೆ ನನ್ನ ಬಳಿ ದಾಖಲೆ ಇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆರೋಪಿಸಿದರು.jk

ಹಾಸನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ನೀರಾವರಿ ಇಲಾಖೆಯಲ್ಲಿ ಕೋಟಿ ಕೋಟಿ ಲೂಟಿಯಾಗಿರುವ ಬಗ್ಗೆ ನನ್ನ ಬಳಿ ದಾಖಲೆ ಇವೆ. ಅದನ್ನ ಬಿಡುಗಡೆ ಮಾಡುವೆ. ಸಿಎಂರನ್ನ ಎ1 ಆರೋಪಿಯನ್ನಾಗಿ ಮಾಡಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಮಾಧ್ಯಮ ಪ್ರತಿನಿಧಿಗಳಿಗೆ 10 ಲಕ್ಷ ರೂ. ವಿಮೆ ಮಾಡಿಸಿ. ತಮಿಳುನಾಡಿನ ಸರ್ಕಾರ ಪತ್ರಕರ್ತರಿಗೆ ವಿಮೆ ಮಾಡಿಸಿದೆ. ಹಾಗೆಯೇ ರಾಜ್ಯದಲ್ಲೂ ಪತ್ರಕರ್ತರಿಗೆ ವಿಮೆ ಮಾಡಿಸಿ ಎಂದು  ಹೆಚ್.ಡಿ ರೇವಣ್ಣ ಆಗ್ರಹಿಸಿದರು.

Key words: Crores -irrigation –department-hassan-former minister- HD Revanna