ಬಾಲಿವುಡ್ ನಟಿ ಜತೆ ಕೆ.ಎಲ್.ರಾಹುಲ್ ಡೇಟಿಂಗ್ !?

Promotion

ಬೆಂಗಳೂರು, ಮೇ 29, 2019 (www.justkannada.in): ಟೀಂ ಇಂಡಿಯಾ ಕ್ರಿಕೆಟರ್ ಕೆ.ಎಲ್. ರಾಹುಲ್ ಬಾಲಿವುಡ್ ನಟಿ ಆಕಾಂಕ್ಷ ರಂಜನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಯೊಂದು ಹರಿದಾಡುತ್ತಿದೆ.

ರಂಜನ್ ಕಪೂರ್ ಹಾಗೂ ರಾಹುಲ್ ಒಟ್ಟಾಗಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ರಂಜನ್ ಕಪೂರ್ ಅವರು ತಮ್ಮ ಇನ್ ಸ್ಟಾಗ್ರಾಂನ್ಲಲಿ ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಹಾಗೂ ಬಾಲಿವುಡ್ ವಲಯದಲ್ಲಿ ರಂಜನ್ ಹಾಗೂ ರಾಹುಲ್ ಸುತ್ತಾಟ ನಡೆಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಸದ್ಯ ವಿಶ್ವಕಪ್ ನಲ್ಲಿ ಬ್ಯುಸಿಯಾಗಿರುವ ಕೆ.ಎಲ್ ರಾಹುಲ್ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.