ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರನ ಬಂಧನ; ನಗದು ಹಣ ಮತ್ತು 7 ಮೊಬೈಲ್ ವಶ…

Promotion

ಬೆಂಗಳೂರು,ಮೇ,11,2019(www.justkannada.in) ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ದಂಧೆ ಕೋರನನ್ನ ಬಂಧಿಸಿ ಆತನ ಬಳಿಯಿದ್ದ ನಗದು ಮತ್ತು 7 ಮೊಬೈಲ್ ಗಳನ್ನ ಅತ್ತಿಬೆಲೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೋಬಳಿಯ ಬಿದರಗುಪ್ಪೆ ನಿವಾಸಿ ಭರತ್ ಬಂಧಿತ ಆರೋಪಿ. ಈತ ಹಾಗೂ ಬಿದರಗುಪ್ಪೆ ನಿವಾಸಿ ಮುನಿರಾಜು, ಅಶೋಕ್ ಅಡಿಗಾರ, ವಾಸಿಯಾದ ಸುಲ್ತಾನ್  ಎಂಬುವವರು ಬಿದರಗುಪ್ಪೆ ಬಳಿ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.

ಈ ನಡುವೆ ನಿನ್ನೆ ಪ್ಲೇ ಆಫ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ಸೆಣಸಾಡಿದ್ದವು. ಈ ವೇಳೆ  ಭರತ್ ಬೆಟ್ಟಂಗ್ ನಡೆಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅತ್ತಿಬೆಲೆ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿ ಭರತ್ ನನ್ನ ಬಂಧಿಸಿದ್ದಾರೆ. ಆತನ ಬಳಿ ಇದ್ದ 65 ಸಾವಿರ ಹಣ ಮತ್ತು 7 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಅತ್ತಿಬೆಲೆ ಮೃತ್ತ ನಿರೀಕ್ಷಕ  ವಿ.ಬಾಲಾಜಿ, ನೇತೃತ್ವದಲ್ಲಿ ಪಿಎಸ್ ಐ ಎಂಕೆ ಮುರುಳೀಧರ್ ಪೇದೆಗಳಾದ ಶಿವಪ್ರಕಾಶ್, ನಾಗರಾಜ್ ,ಉಮೇಶ್, ಅರುಣ್ ಕುಮಾರ್  ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Key words: Cricket –betting- arrests-Cash – 7 mobile- siege