ದಶಪಥ ರಸ್ತೆಯ ಕ್ರೆಡಿಟ್ ವಾರ್: ಎಸ್.ಎ ರಾಮದಾಸ್ ಮತ್ತು ಹೆಚ್.ವಿಶ್ವನಾಥ್ ಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ.

Promotion

ಮೈಸೂರು,ಆಗಸ್ಟ್,24,2021(www.justkannada.in): ಬೆಂಗಳೂರು – ಮೈಸೂರು ದಶಪಥ ರಸ್ತೆಯ ವಿಚಾರದಲ್ಲಿ ಕ್ರೆಡಿಟ್ ವಾರ್ ಮುಂದುವರೆದಿದ್ದು, ತಮ್ಮನ್ನ ಟೀಕಿಸಿದ್ದ ಎಂಎಲ್ ಸಿ ಹೆಚ್.ವಿಶ್ವನಾಥ್ ಹಾಗೂ ಶಾಸಕ ಎಸ್.ಎ ರಾಮದಾಸ್ ಗೆ ಇದೀಗ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ  ಸಂಸದ ಪ್ರತಾಪ್ ಸಿಂಹ, ಮೈಸೂರು – ಬೆಂಗಳೂರು ದಶಪಥ ರಸ್ತೆಯ ಕಾಮಗಾರಿ ವೀಡಿಯೋ ಮಾಡಿದ್ದು ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ. ಮೋದಿ ಸರಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿ ಕಾಮಗಾರಿ ಚಾಲನೆ ನೀಡಲಾಗಿತ್ತು. ಈ ಮಧ್ಯೆ 8,066 ಕೋಟಿ ರೂ ಪ್ರಾಜೆಕ್ಟ್‌ ನಲ್ಲಿ 8 ಪೈಸೆನಾದರೂ ಹೆಚ್ ವಿಶ್ವನಾಥ್ ಅವರು ಬಿಡುಗಡೆ ಮಾಡಿಸಿದ್ರಾ? ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ರಾ? ಎಂದು ಪ್ರಶ್ನಿಸಿದರು.

ವಿಶ್ವನಾಥ್ ಅವರೇ ಮಾಧ್ಯಮದ ಮುಂದೆ ಚರ್ಚೆ ಮಾಡೋಣಾ ಬನ್ನಿ.

ನಿತಿನ್ ಗಡ್ಕರಿ ನಮ್ಮ‌ ಕೇಂದ್ರ ಸರಕಾರದ ಮಂತ್ರಿ. ಮೋದಿ ಅವರ ಆಡಳಿತದಲ್ಲಿ ಶುರುವಾಗುವ ಪ್ರಾಜೆಕ್ಟ್ ಗಳು ಮೋದಿ ಸರಕಾರಕ್ಕೆ ಸಲ್ಲಬೇಕು. ವಿಶ್ವನಾಥ್ ಅವರು ತಾವೇ ಈ ಯೋಜನೆ ತಂದಿದ್ದರೆ ತಮ್ಮ ಚುನಾವಣೆ ವೇಳೆ ಯಾಕೆ ಹೇಳಿಲ್ಲ. ವಿಶ್ವನಾಥ್ ಅವರು ಟೀಕೆ ಮಾಡದ ವ್ಯಕ್ತಿಯೆ ಇಲ್ಲ. ಟ್ರಂಪ್, ಬೈಡೆನ್ ನೇ ಅವರು ಬಿಟ್ಟಿಲ್ಲ. ದೇವೇಗೌಡ್ರು, ಯಡಿಯೂರಪ್ಪ, ವಿಜಯೇಂದ್ರ, ಎಸ್.ಟಿ. ಸೋಮಶೇಖರ್ ಎಲ್ಲರನ್ನೂ ವಿಶ್ವನಾಥ್ ಬೈಯ್ದಿದ್ದು ಆಯ್ತು. ಬಸವರಾಜ್ ಬೊಮ್ಮಾಯಿ ಬಗ್ಗೆ ಮಾತಾಡೋಕೆ ಇನ್ನೂ ಏನು ಸಿಕ್ಕಿಲ್ಲ. ಈ‌ ಗ್ಯಾಪ್ ನಲ್ಲಿ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ವಿಶ್ವನಾಥ್ ಅವರೇ ಮಾಧ್ಯಮದ ಮುಂದೆ ಚರ್ಚೆ ಮಾಡೋಣಾ ಬನ್ನಿ. ಈ ಯೋಜನೆಯ ಡೇಟ್ ಟು ಡೇಟ್ ಚರ್ಚೆಯಾಗಲಿ. ಹಳೆ ಉಂಡುವಾಡಿ ಕುಡಿಯುವ ನೀರು ಯೋಜನೆಗೂ ವಿಶ್ವನಾಥ್ ಐದು ಪೈಸೆ ಕೊಡಿಸಿಲ್ಲ. ನೀವು ಸತ್ಯಸಂಧರ ರೀತಿ ಮಾತನಾಡಬೇಡಿ ವಿಶ್ವನಾಥ್ ಅವರೇ ಎಂದು  ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ಇದೇ ವೇಳೆ  ಮಾಜಿ ಸಚಿವ ಮಹದೇವಪ್ಪ ವಿರುದ್ದವೂ ಹರಿಹಾಯ್ದ ಸಂಸದ ಪ್ರತಾಪ್ ಸಿಂಹ, ಹೆಚ್.ಸಿ ಮಹದೇವಪ್ಪ ಅವರೇ ನೀವು ನಿಮ್ಮ‌ ಅವಧಿಯಲ್ಲಿ ಮಾಡಿದ ಒಂದು ರಸ್ತೆ ನೆಟ್ಟಗಿದ್ದಿಯಾ ಸರ್?ನಿಮಗೆ ದಶಪಥ ರಸ್ತೆಯ ಕ್ರೆಡಿಟ್ ಬೇಕಾ? ನೀವು ಹಿರಿಯರು. ನೀವು ಮಾರ್ಗದರ್ಶನ ಮಾಡಿ ಸರ್. ಬೀದಿ ಜಗಳಕ್ಕೆ ಇಳಿಯಬೇಡಿ ಎಂದು ಟಾಂಗ್ ನೀಡಿದರು.

ಶಾಸಕ ರಾಮದಾಸ್ ವ್ಯಂಗ್ಯವಾಗಿ ತಿರುಗೇಟು ಕೊಟ್ಟ ಪ್ರತಾಪ್ ಸಿಂಹ

ದಶಪಥ ರಸ್ತೆ ಕ್ರೆಡಿಟ್ ಭಾರತ ಮಾತೆಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ಧ ಶಾಸಕ ಎಸ್.ಎ ರಾಮದಾಸ್ ಗೂ ವ್ಯಂಗ್ಯವಾಗಿ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ಮೋದಿ ಅವರು ಭಾರತ ಮಾತೆಯ ಸುಪುತ್ರ. ಅವರು ಮಾಡುವ ಎಲ್ಲಾ ಕೆಲಸವೂ ಭಾರತ ಮಾತೆಗೆ ಸೇರಿದ್ದು. ಕ್ಷೇತ್ರದಲ್ಲಿ ಮಾಡುವ ಕೆಲಸ ಭಾರತ ಮಾತೆಗೆ ಸೇರಿದ್ದು ಎಂದು ಹೇಳುವ ಕಾಲ ಈಗ ಬಂತಲ್ಲ ನನಗೆ ಸಂತೋಷವಾಗಿದೆ. ಕೆ.ಆರ್. ಕ್ಷೇತ್ರದಲ್ಲಿ ದಶಕಗಳಿಂದ ಬಿದ್ದಿರುವ ಕಸವನ್ನು ಸ್ವಚ್ಚ ಮಾಡುವ ಕೆಲಸವನ್ನು ನಾನೇ ಮಾಡಿಸುತ್ತಿದ್ದೇನೆ. ಅದರ ಕ್ರೆಡಿಟ್ ಕೂಡ ಭಾರತ ಮಾತೆಗೆ ಸೇರಿದ್ದಾಗುತ್ತೆ ಎಂದು ಹೇಳಿದರು.

ENGLISH SUMMARY…

Mysuru-Bengaluru 10-lane highway credit war: MP Pratap Simha counters MLA S.A. Ramdas and MLC H. Vishwanath
Mysuru, August 24, 2021 (www.justkannada.in): The war of words over whom should the credit of construction of the Bengaluru-Mysuru 10-lane highway go has continued. It is now the turn of MP Pratap Simha who has counter replied to the allegations made against him by his own party MLA S.A. Ramdas and MLC H. Vishwanath.
Speaking in Mysuru today Pratap Simha informed that he wasn’t aware that a video of the ongoing works of the Mysuru-Bengaluru showing him would ignite such a ruckus. “The Modi government released the required funds and started the works. A total sum of Rs. 8,066 crores are being spent on this project. Did H.Vishwanath make any efforts to get at least 8 paise released from the Union Government? Did former CM Siddaramaiah make any efforts?” he questioned.
Further, he said, “the credit of any project which is commenced during Modi government’s tenure should go to his government. If it is the contribution of H. Vishwanath why didn’t you inform about it during the elections? There is no person whom H. Vishwanath has not criticized. He has not spared even Trump and Biden. He has criticized almost everyone including Deve Gowda, B.S. Yedyurappa, Vijendra, S.T. Somashekar. However, it appears he still has not found any issue to criticize Chief Minister Basavaraj Bommai. So in this gap, he is criticizing me. Please come in front of the media, let us discuss,” he invited.
In his response to MLA S.A. Ramdas’s comments saying that the credit should go to Bharat Mata, he sarcastically said, “Modi is the son of Bharat Mata. All the works that he does are for the cause of Bharat Mata. However, I am happy that at least the time has come where the credit of development works is given to Bharat Mata. In K.R. Constituency garbage piles have not been removed for several decades, I will shoulder the responsibility of removing them. Let the credit go to Bharat Mata.”
Keywords: MP Pratap Simha/ Mysuru-Bengaluru Highway/ 10-lane highway/ credit war

Key words: Credit War -Dashapath Road- MP Pratap Simha-SA Ramdas -H.Vishwanath.