ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ಆರೋಪ: ಮೈಸೂರು ಡಿಸಿ ವಿರುದ್ಧ ಕಿಡಿಕಾರಿದ ಶಾಸಕ ಸಾ.ರಾ ಮಹೇಶ್…

ಮೈಸೂರು,ಮೇ,31,2021(www.justkannada.in): ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಮೈಸೂರು ಜಿಲ್ಲಾಡಳಿತ ಮುಚ್ಚಿಟ್ಟಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.jk

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್,  ಮೈಸೂರು ನಗರ ವ್ಯಾಪ್ತಿಯಲ್ಲೇ ಮೇ 1 ರಿಂದ 29ರ ವರೆಗೆ 969 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕವನ್ನು ಕೊಟ್ಟಿದೆ. 731 ಜನರ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ಹಾಗೆಯೇ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಿಡಿಕಾರಿದ ಶಾಸಕ ಸಾ.ರಾ ಮಹೇಶ್, ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟು  ಮೈಸೂರು ಜಿಲ್ಲಾಡಳಿತ ಸರ್ಕಾರಕ್ಕೂ ವಂಚನೆ ಮಾಡಿದೆ. ಡಿಸಿ ರೋಹಿಣಿ ಸಿಂಧೂರಿ ಬೇರೆಯವರ ಮೇಲೆ ಹಾಕುತ್ತಾರೆ. ಬೇರೆಯವರ ಮೇಲೆ ಹಾಕೋದರಲ್ಲಿ ಅವರು ಎಕ್ಸ್​ಪರ್ಟ್​. ಮೈಸೂರು ಜಿಲ್ಲೆಯಲ್ಲಿ 3 ಸಾವಿರ ಜನ ಮೃತಪಟ್ಟಿದ್ದಾರೆ. ನೊಂದಂತಹ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿ ಎಂದು ಸಾ.ರಾ ಮಹೇಶ್ ಆಗ್ರಹಿಸಿದರು.

ಮಾನವೀಯತೆ, ಮನುಷ್ಯತ್ವ, ತಾಯಿ ಹೃದಯವೇ ಇಲ್ವಾ? ಸರ್ಕಾರವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ ಎಂದು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹರಿಹಾಯ್ದ ಸಾ.ರಾ ಮಹೇಶ್,  ಇದೇ ವಿಷಯವನ್ನು ನಾನು ಸಿಎಂ ವಿಸಿಯಲ್ಲಿ ಹೇಳಿದ್ದೇನೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತೆ. ಮಾನವ ಹಕ್ಕುಗಳ ಆಯೋಗ, ರಾಜ್ಯಪಾಲರಿಗೆ ದೂರು ನೀಡುತ್ತೇನೆ. ಸಿಎಂ ಯಡಿಯೂರಪ್ಪ ಅವರಿಗೆ ಕಳುಹಿಸಿ ಕೊಡುತ್ತೇನೆ  ಎಂದು ಹೇಳಿದರು.

 

Key words: Covid – death-hide-Mysore DC -MLA -sa.ra Mahesh

ENGLISH SUMMARY……

Allegations of concealing number COVID deaths: MLA Sa. Ra. Mahesh expresses displeasure against Mysuru DC
Mysuru, May 31, 2021 (www.justkannada.in): JDS MLA Sa. Ra. Mahesh alleged that the District Administration of Mysuru has concealed the total deaths that occurred in Mysuru District.
Addressing a press meet today he informed that 969 people have lost their lives between May 1 and 29 in Mysuru City limits alone. But the district administration says the total number of deaths is only 238, why has it not shown the remaining 731 deaths?!
Expressing his displeasure against Deputy Commissioner Rohini Sindhuri, he alleged that the district administration has cheated the people of the district by concealing the truth. “The DC accuses others, she is an expert in it. More than 3,000 people have died in Mysuru district,” he added and demanded to provide financial help to all those families.
He also said that it is a violation of human rights and he would complain to the governor and also bring it to the notice of Chief Minister B.S. Yedyurappa.
Keywords: JDS/ MLA Sa. Ra. Mahesh/ Mysuru District/ DC Rohini Sindhuri/ COVID deaths/ real numbers concealed