ಸೂಕ್ತ ಮಾಹಿತಿ ಇಲ್ಲದೆ ಸಚಿವರು ಮಾತನಾಡಬಾರದು-ಲಾಕ್ ಡೌನ್ ಮುಂದುವರಿಕೆ ಬಗ್ಗೆ ಸಚಿವ ಸುಧಾಕರ್ ಪ್ರತಿಕ್ರಿಯೆ…

ಬೆಂಗಳೂರು,ಮೇ,31,2021(www.justkannada.in):  ಲಾಕ್ ಡೌನ್ ಮುಂದುವರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಹೇಳಿಕೆ ಹಿನ್ನೆಲೆ, ಸೂಕ್ತ ಮಾಹಿತಿ ಇಲ್ಲದೆ ಸಚಿವರು ಮಾತನಾಡಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ಧಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ತಜ್ಞರ ವರದಿ ಆಧರಿಸಿ ಲಾಕ್ ಡೌನ್  ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ. ಜನರ ಭಾವನೆ ಆಧರಿಸಿ ಸಚಿವರು ಮಾತನಾಡಬಾರದು ಹಾಗಂತ ಏಕಾಏಕಿ ಏನು ನಿರ್ದಾರ ಮಾಡಲು ಆಗಲ್ಲ.  ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಲಾಕ್ ಡೌನ್ ಮುಂದುವರಿಕೆ ನಿರ್ಧಾರ ಮಾಡಲಾಗುತ್ತದೆ ಎಂದರು.Oxygen -deficiency -prevention - timely -Minister -Dr. K. Sudhakar.

ನಾಯಕತ್ವ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಸಿಎಂ ಸ್ಥಾನದಲ್ಲಿ ಬಿಎಸ್ ಯಡಿಯೂರಪ್ಪ  ಇದ್ದಾರೆ.  ಅವರಿರುವಾಗ ಬದಲಾವಣೆ ಮಾತು ಬೇಕೆ..? ಈ ಸಂದರ್ಭದಲ್ಲಿ ರಾಜಕೀಯ ಮಾತಾಡುವುದು ಸರಿಯಲ್ಲ ಎಂದರು.

Key words: Minister -Sudhakar – Lockdown – Continue-reaction