ಕೋವಿಡ್ ನಿಂದ ಮೃತಪಟ್ಟವರ ಮೃತದೇಹ ನೀಡಲು ಹಣ ಕೇಳಿದರೆ ಲೈಸೆನ್ಸ್ ರದ್ದು –ರಾಜ್ಯ ಸರ್ಕಾರದಿಂದ ಆದೇಶ…..

Promotion

ಬೆಂಗಳೂರು,ಮೇ,25,2021(www.justkannada.in): ಕೋವಿಡ್ ನಿಂದ ಮೃತಪಟ್ಟವರ ಮೃತದೇಹ ನೀಡಲು ಹಣ ಕೇಳಿದರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.jk

ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮೃತದೇಹ ಕೊಡಲು ಬಾಕಿ ಬಿಲ್ ನೀಡುವಂತೆ ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆ, ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನ ನೀಡಿದೆ. ಈ ಕುರಿತು ರಾಜ್ಯ ಸರ್ಕಾರ ನೂತನ ಆದೇಶ  ಹೊರಡಿಸಿದ್ದು, ಮೃತದೇಹ ನೀಡಲು ಹಣ ಕೇಳಿದರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ತಿಳಿಸಿದೆ.

ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ನೀಡಲು ಬಾಕಿ ಹಣ ಪಾವತಿಸುವಂತೆ ಖಾಸಗಿ ಆಸ್ಪತ್ರೆಗಳು ಒತ್ತಾಯಿಸುತ್ತಿರುವ ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಬಿಲ್ ಪಾವತಿಗೆ ಒತ್ತಾಯ, ಒತ್ತಡ ಹೇರದಂತೆ ಹಾಗೂ ಬಿಲ್ ಪಾವತಿ ಮಾಡದಿದ್ದಲ್ಲಿ ಮೃತದೇಹ ಹಸ್ತಾಂತರಿಸಲು ನಿರಾಕರಿಸುವಂತಿಲ್ಲವೆಂದು ಆದೇಶದಲ್ಲಿ ರಾಜ್ಯ ಸರ್ಕಾರ  ಉಲ್ಲೇಖ ಮಾಡಿದೆ.covid-dead-body-cancels-license-order-state-government

ಈ ರೀತಿ ವರದಿಯಾದ ಪ್ರಕರಣಗಳ ಮಾಹಿತಿ ಹಾಗೂ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ  ರಾಜ್ಯ ಸರ್ಕಾರ ಸೂಚನೆ ನೀಡಿದೆ.

Key words: Covid  – dead body –cancels- license -Order – State Government.