ಮೈಸೂರಿನ ವಿವಿಧೆಡೆ ಉಚಿತವಾಗಿ ಕೋವಿಡ್ 19 ಪರೀಕ್ಷೆ

ಮೈಸೂರು, ಜೂನ್ 21, 2020 (www.justkannada.in): ಕೊರೊನಾ ಮಹಾಮಾರಿ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ಖಾಸಗಿ ಕ್ಲಿನಿಕ್ ಗಳಲ್ಲಿ SARI ಹಾಗೂ ILI ಪ್ರಕರಣಗಳು ಕಂಡುಬಂದಲ್ಲಿ ಕೋವಿಡ್ 19 ಪರೀಕ್ಷೆಗೆ ಸೂಚಿಸುವಂತೆ ಮನವಿ ಮಾಡಲಾಗಿದೆ. ಜತೆಗೆ ಉಚಿತವಾಗಿ ಕೋವಿಡ್ 19 ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದೆಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ.

ಕೋವಿಡ್ ಆಸ್ಪತ್ರೆ ಮೇಟಗಳ್ಳಿ, ಕೆ. ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ (ಬನ್ನಿಮಂಟಪ), ಪ್ರಾಥಮಿಕ ಆರೋಗ್ಯ ಕೇಂದ್ರ (ರಾಜೇಂದ್ರ ನಗರ), ಪ್ರಾಥಮಿಕ ಆರೋಗ್ಯ ಕೇಂದ್ರ (ಹೆಚ್.ಹೆಚ್.ಎಂ.ಬಿ.ಜಿ ಜಾಕಿ ಕ್ವಾರ್ಟರ್ಸ್), ಮೈಸೂರು ಮಕ್ಕಳ ಕೂಟ (ಕೃಷ್ಣಮೂರ್ತಿ ಪುರಂ) ಈ ಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್ 19 ಪರೀಕ್ಷೆ ಮಾಡಲಾಗುವುತ್ತದೆ.

ತಾಲ್ಲೂಕು ಹಾಗೂ ಗ್ರಾಮೀಣ ಭಾಗದ ಜನರು ಆಯಾ ತಾಲ್ಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ. ಪರೀಕ್ಷೆಗೊಳಪಟ್ಟ ರೋಗಿಗಳಿಗೆ ಯಾವುದೇ ರೀತಿಯ ಕ್ವಾರಂಟೈನ್ ನಲ್ಲಿ ಇರುವ ಅವಶ್ಯಕತೆ ಇಲ್ಲವೆಂದು ಆರೋಗ್ಯ ಇಲಾಖೆಯಿಂದ ಸ್ಷಷ್ಟನೆ ನೀಡಿದೆ.