ಕೋವಿಡ್ ಹಿನ್ನೆಲೆ : 14 ದಿನಗಳ ಜನತಾ ಕರ್ಫ್ಯೂ ವೇಳೆ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ಬಗ್ಗೆ  ಮೈಸೂರು ವಿವಿ ಆದೇಶ….

ಮೈಸೂರು,ಏಪ್ರಿಲ್,27,2021(www.justkannada.in):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಳವಾಗಿದ್ದು ಈ ಹಿನ್ನೆಲೆ ಇಂದು ರಾತ್ರಿ 9 ರಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದ್ದು ಹೀಗಾಗಿ ಈ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಣೆ ಬಗ್ಗೆ ಮೈಸೂರು ವಿಶ್ವ ವಿದ್ಯಾನಿಲಯ ಆದೇಶ ಹೊರಡಿಸಿದೆ.Covid -19-Mysore university- officer -staff –duty- 14 days - Janata curfew.

ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ವಿವಿ ಕುಲಸಚಿವರು, ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಸ್ನಾತಕೋತ್ತರ ಅಧ್ಯಯನ ವಿಭಾಗದ ಅಧ್ಯಕ್ಷರು, ನಿರ್ದೇಶಕರು. ಬಟವಾಡೆ ಅಧಿಕಾರಿಗಳು, ಅಧೀನ ಕಾಲೇಜುಗಳ ಪ್ರಾಂಶುಪಾಲರು, ನಿರ್ದೇಶಕರು, ಸ್ನಾತಕೋತ್ತರ ಕೇಂದ್ರಗಳು ಇವರುಗಳಿಗೆ ತಿಳಿಸುವುದೇನೆಂದರೆ, ದೇಶದಾದ್ಯಂತ ತೀವ್ರಗತಿಯಲ್ಲಿ ಹರಡುತ್ತಿರುವ ಕೋವಿಡ್-19 ಸೋಂಕಿನ (ಕೊರೊನಾ ವೈರಸ್) ಎರಡನೆಯ ಅಲೆಯ ಹರಡುವಿಕೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮೇಲನ ಉಲ್ಲೇಖಿತ (1) ಸರ್ಕಾರದ ಆದೇಶದನ್ವಯ ಉಲ್ಲೇಖಿತ (3)ರ ಸುತ್ತೋಲೆಯ ಮುಂದುವರಿಕೆಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಉದ್ಯೋಗಿಗಳು ಈ ಕೆಳಗಿನಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

ಗ್ರೂಪ್-ಬಿ (ಅಧೀಕ್ಷಕರು ಹಾಗೂ ಮೇಲ್ಪಟ್ಟ ಅಧಿಕಾರಿಗಳು) ದಿನಾಂಕ: 28.04 2021 ರಿಂದ 11.05.2021ರವರೆಗೆ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಕಡ್ಡಾಯವಾಗಿ ಕಛೇರಿ ಕೆಲಸಕ್ಕೆ ಹಾಜರಾಗತಕ್ಕದ್ದು.

ಉಳಿದಂತೆ ಗ್ರೂಪ್ ಸಿ ಹಾಗೂ ಇತರೆ ಸಿಬ್ಬಂದಿ ವರ್ಗದವರು, ಮೇಲಧಿಕಾರಿಗಳು ಮೂಲಕ ಸಂಪರ್ಕಿಸಿ ತುರ್ತು ಅಗತ್ಯ ಕೆಲಸ ನಿರ್ವಹಿಸುವಂತೆ ಸೂಚಿಸಿದಾಗ ಅಂತಹ ಉದ್ಯೋಗಿಗಳು ತಪ್ಪದೇ ಕೂಡಲೇ ಕಛೇರಿಗೆ ಬಂದು ಕಾರ್ಯನಿರ್ವಹಿಸಬೇಕು.

ಹಾಗೆಯೇ  ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ನಿರ್ದೇಶಕರುಗಳು / ಸಂಯೋಜಕರುಗಳು ಕಡ್ಡಾಯವಾಗಿ ವಿಭಾಗಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸುವುದು. ಹಾಗೂ ಅಗತ್ಯ ಕೆಲಸವಿದ್ದಲ್ಲಿ. ಸಿಬ್ಬಂದಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಗತ್ಯ ಕೆಲಸ ನಿರ್ವಹಿಸುವಂತೆ ಸೂಚಿಸಿದಾಗ ಅಂತಹ ಉದ್ಯೋಗಿಗಳು ತಪ್ಪದೇ ಕೂಡಲೇ ಕಚೇರಿಗೆ ಬಂದು ಕಾರ್ಯನಿರ್ವಹಿಸುವುದು.

ಅಧ್ಯಾಪಕರುಗಳು ಮನೆಯಿಂದಲೇ ಆನ್ ಲೈನ್ ತರಗತಿಗಳನ್ನು ತೆಗೆದುಕೊಳ್ಳಬಹುದಾಗಿದೆ. ಮನೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿದ್ದಲ್ಲಿ  ಆಯಾ ವಿಭಾಗ ಕೇಂದ್ರಗಳಿಗೆ ತೆರಳಿ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳಬಹುದಾಗಿದೆ.covid-19-mysore-university-officer-staff-duty-14-days-janata-curfew

ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳು ಕೇಂದ್ರಗಳು ಕಾಲೇಜುಗಳಲ್ಲಿ ಆಡಿಟ್‌ಗೆ ದಾಖಲಾತಿಗಳನ್ನು ಒದಗಿಸಲು ಆಕ್ಷೇಪಣೆಗೆ ಸಂಬಂಧಪಟ್ಟಂತೆ ಕೆಲಸಗಳು ಬಾಕಿ ಉಳಿದಿದ್ದಲ್ಲಿ ಕಡ್ಡಾಯವಾಗಿ ಕಛೇರಿಗೆ ಬಂದು ಪೂರಕ ದಾಖಲೆಗಳೊಡನೆ ಕಾರ್ಯನಿರ್ವಹಿಸಿ ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು

ಮತ್ತು ಕೋವಿಡ್-19 (ಕೊರೊನ ವೈರಾಣು) ಸಾಂಕ್ರಮಿಕ ರೋಗ ಹರಡದಿರುವಂತೆ ರಾಜ್ಯ ಸರ್ಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಸೂಚನೆ ನೀಡಿದ್ದಾರೆ.

Key words: Covid -19-Mysore university- officer -staff –duty- 14 days – Janata curfew.