ಮೌಖಿಕ ಅಭಿಪ್ರಾಯ ಪ್ರಸಾರಕ್ಕೆ ತಡೆ ಸಾಧ್ಯವಿಲ್ಲ: ಮದ್ರಾಸ್‌ ಹೈಕೋರ್ಟ್‌

covid-19-management-madaras-court-warning-to-central-bjp-government
Promotion

ಚೆನ್ನೈ, ಮೇ 01, 2021 : ನ್ಯಾಯಮೂರ್ತಿಗಳು ವಿಚಾರಣೆ ಸಂದರ್ಭದಲ್ಲಿ ತನ್ನ ವಿರುದ್ಧ ವ್ಯಕ್ತಪಡಿಸುವ ಮೌಖಿಕ ಅಭಿಪ್ರಾಯಗಳು ಮಾಧ್ಯಮದಲ್ಲಿ ವರದಿ ಆಗುವುದಕ್ಕೆ ತಡೆ ಕೊಡಬೇಕು ಎಂಬ ಚುನಾವಣಾ ಆಯೋಗದ ಕೋರಿಕೆಯನ್ನು ಮದ್ರಾಸ್‌ ಹೈಕೋರ್ಟ್‌ ತಳ್ಳಿ ಹಾಕಿದೆ.

ದೇಶದಲ್ಲಿ ಕೋವಿಡ್‌–19ರ ಎರಡನೇ ಅಲೆಯು ಈ ಪ್ರಮಾಣದಲ್ಲಿ ಹರಡಲು ಚುನಾವಣಾ ಆಯೋಗವೇ ಕಾರಣ. ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಮದ್ರಾಸ್‌ ಹೈಕೋರ್ಟ್‌ ಕೆಲ ದಿನಗಳ ಹಿಂದೆ ಹೇಳಿತ್ತು. ಈ ಅಭಿಪ್ರಾಯಕ್ಕೆ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಸಿಕ್ಕಿದೆ. ಅದು ಆಯೋಗದ ವರ್ಚಸ್ಸು ಕುಂದಿಸಿದೆ ಎಂದು ಆಯೋಗದ ಪರವಾಗಿ ವಾದಿಸಿದ ವಕೀಲರು ಹೇಳಿದರು.

jk

ಮುದ್ರಣ ಮಾಧ್ಯಮ ಮತ್ತು ಸುದ್ದಿ ವಾಹಿನಿಗಳು ಮೌಖಿಕ ಅಭಿಪ್ರಾಯಗಳನ್ನು ಪ್ರಸಾರ ಮಾಡುವುದಕ್ಕೆ ತಡೆ ಕೊಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್‌ ರಾಮಮೂರ್ತಿ ಅವರ ಪೀಠವು ಹೇಳಿತು.
ಕೋವಿಡ್‌–19 ತಡೆ ಲಸಿಕೆ, ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌ ಲಭ್ಯತೆ ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಿದ ವಿಷಯದ ವಿಚಾರಣೆ ಸಂದರ್ಭದಲ್ಲಿ ಆಯೋಗದ ವಕೀಲರು ವಿಷಯ ಪ್ರಸ್ತಾಪಿಸಿದರು.‘ಈ ವಿಷಯದ (ಮೌಖಿಕ ಅಭಿಪ್ರಾಯ ಪ್ರಸಾರಕ್ಕೆ ತಡೆ) ಬಗ್ಗೆ ಮುಂದೆ ಯೋಚನೆ ಮಾಡಬಹುದು. ಈಗ, ತುರ್ತಾಗಿ ಗಮನಿಸಬೇಕಾದ ವಿಷಯಗಳಿವೆ’ ಎಂದು ಪೀಠವು ಹೇಳಿತು. ನ್ಯಾಯಾಲಯದ ಅಭಿಪ್ರಾಯದ ಆಧಾರದಲ್ಲಿ ಆಯೋಗದ ವಿರುದ್ಧ ದೂರು ದಾಖಲಿಸಲು ಹಲವು ಮಂದಿ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ್ದಾರೆ. ಎಫ್‌ಐಆರ್‌ ಕೂಡ ದಾಖಲಾಗಿದೆ ಎಂದು ವಕೀಲರು ಹೇಳಿದರು.

covid-19-management-madaras-court-warning-to-central-bjp-government

ಕೃಪೆ : ಪ್ರಜಾವಾಣಿ

key words : covid-19-management-madaras-court-warning-to-central-bjp-government