ಸುಶಾಂತ್ ತಂದೆಗೆ ಹಿನ್ನೆಡೆ: ನ್ಯಾಯ್ ರಿಲೀಸ್’ಗೆ ಕೋರ್ಟ್ ಗ್ರೀನ್ ಸಿಗ್ನಲ್

Promotion

ಬೆಂಗಳೂರು, ಜೂನ್ 11, 2021 (www.justkannada.in): ಸುಶಾಂತ್‍ಸಿಂಗ್ ಜೀವನ ಆಧರಿಸಿದ ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ ನ್ಯಾಯಾಲಯ.

ಸುಶಾಂತ್‍ಸಿಂಗ್ ರಜಫೂತ್ ಜೀವನ ಆಧರಿಸಿ ತಯಾರಿಸಲಾಗಿರುವ ಸಿನಿಮಾ ಬಿಡುಗಡೆಗೆ ತಡೆ ನೀಡಲು ದೇಹಲಿ ಹೈಕೋರ್ಟ್ ನಿರಾಕರಿಸಿದೆ.

ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ಅವರ ಜೀವನ ಆಧರಿಸಿ ನ್ಯಾಯ್ ಎಂಬ ಚಿತ್ರ ತಯಾರಾಗಿದ್ದು ಬರುವ ಶುಕ್ರವಾರ ಬಿಡುಗಡೆಗೆ ಸಿದ್ದವಾಗಿದೆ. ಈ ಕುರಿತು ಸುಶಾಂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ತಮ್ಮ ಪುತ್ರನ ಜೀವನ ಆಧರಿಸಿ ನಿರ್ಮಿಸಲಾಗಿರುವ ಚಲನಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಬಿಡುಗಡೆಗೆ ಒಪ್ಪಿಗೆ ನೀಡಿದೆ.cbi-probe-bollywood-actor-sushanth-singh-suciude-case