ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ ಮತ್ತು ತಂದೆಯ ಜೊತೆಗಿದ್ಧ ಮಹಿಳೆಯ ಬರ್ಬರ ಹತ್ಯೆ.

Promotion

ಮೈಸೂರು,ಅಕ್ಟೋಬರ್,22,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ಜೋಡಿ ಕೊಲೆಯಾಗಿದ್ದು ಮಗನೇ ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯನ್ನ ಬರ್ಬರ ಹತ್ಯೆ ಮಾಡಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಮೈಸೂರಿನ ಶ್ರೀ ನಗರದಲ್ಲಿ ಈ ಘಟನೆ ನಡೆದಿದೆ. ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ  ಸಾಗರ್ ನಾಪತ್ತೆ ಯಾಗಿದ್ದಾನೆ. ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿಯಾಗಿದ್ದು, ಲತಾ ಮೈಸೂರಿನ ಶ್ರೀನಗರದಲ್ಲಿ ವಾಸಿಸುತ್ತಿದ್ದರು.

ಈ ನಡುವೆ ಲತಾ ಮನೆಗೆ ನುಗ್ಗಿದ ಸಾಗರ್  ಮೊದಲು ತಂದೆಯನ್ನ ಮಚ್ಚಿನಿಂದ ಕೊಲೆ ಮಾಡಿದ್ದಾನೆ.  ನಂತರ ಲತಾಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದು, ಲತಾ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಲತಾ ಪುತ್ರ ನಾಗಾರ್ಜುನಿಗೂ ಸಾಗರ್ ಮಚ್ಚಿನಿಂದ ಹಲ್ಲೆಗೈದು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಗಾಯಗೊಂಡಿರುವ ನಾಗಾರ್ಜುನ ಆಸ್ಪತ್ರೆ ದಾಖಲು ಮಾಡಲಾಗಿದೆ. ಈ ಕುರಿತು ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Couple- murder – Mysore-son- father

ENGLISH SUMMARY….

Twin murder in Mysuru: Son kills father and woman who was with him
Mysuru, October 22, 2021 (www.justkannada.in): The cultural capital of the state Mysuru today woke up to the shocking news of twin murder. A youth has allegedly murdered his father and another woman who was with him. Later, he fled the scene.
The incident took place in Srinagara, Mysuru. The deceased are identified as Shivaprakash (56) and Latha (48). The alleged murderer Sagar has absconded. Shivaprakash was a resident of K.G. Koppal and Latha was residing in Srinagara.
Sagar who came to know that his father was in Latha’s house barged into the house and killed him. He also killed Latha using a sickle. Nagarjuna, son of Latha who tried to stop also has received injuries. The attacker has absconded. The injured Nagarjuna has been admitted to the hospital. A case has been registered in the South Police Station.
Keywords: Twin murder/ Mysuru/ Srinagara/ son kills father and woman