ಲಸಿಕೆ ನೀಡಿಕೆಯಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿ: ಶತಕೋಟಿ ಡೋಸ್ ಲಸಿಕೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದೆ- ಪ್ರಧಾನಿ ಮೋದಿ.

ನವದೆಹಲಿ,ಅಕ್ಟೋಬರ್,22,2021(www.justkannada.in): ಲಸಿಕೆ ನೀಡಿಕೆಯಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಯಶಸ್ವಿಯಾಗಿದ್ದು, ದೇಶಾದ್ಯಂತ 100 ಕೋಟಿ ಲಸಿಕೆಯನ್ನು ನೀಡಲಾಗಿದೆ. ಈ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬ ಭಾರತೀಯನಿಗೆ ಹೃತ್ಪೂರ್ವಕ ಅಭಿನಂದನೆಗಳು. ಇಂದು ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ದೇಶದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣವಾದ ಹಿನ್ನೆಲೆ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡಲಾಗುತ್ತಿದೆ. ಭಾರತ ಕೊರೊನಾ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಯಶಸ್ಸು.  ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದ ಅರ್ಪಿಸುತ್ತೇನೆ.  ಲಸಿಕೆ ನೀಡಿಕೆಯಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ. ಇದು ದೇಶದ ಸಾಮರ್ಥ್ಯದ ಪ್ರತಿಬಿಂಬ. ಇಡಿ ವಿಶ್ವ ಭಾರತದ ಸಾಮರ್ಥ್ಯವನ್ನ ನೋಡುತ್ತಿದೆ ಎಂದರು.

ಭಾರತದಲ್ಲಿ ಉಚಿತ ಕೋವಿಡ್ ಲಸಿಕೆ ನೀಡಲಾಗಿದೆ.  ಭಾರತ ಕೊರೋನಾ ವಿರುದ್ಧ ಹೋರಾಟ ನಡೆಸುತ್ತದೆಯೇ. ಲಸಿಕೆ ತಯಾರಿಸುತ್ತದೆಯೇ. ಹಣ ಎಲ್ಲಿಂದ ಬರುತ್ತದೆ ಎಂಬ ಹಲವು ಪ್ರಶ್ನೆಗಳು ಎದ್ಧಿತ್ತು. ಈಗ 100 ಕೋಟಿ ಡೋಸ್ ಲಸಿಕೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದೆ. ಕಡಿಮೆ ಅವಧಿಯಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.  ಕಠಿಣ ಗುರಿ ಇಟ್ಟುಕೊಂಡ ಸಾಧಿಸುವುದು ಭಾರತಕ್ಕೆ ಗೊತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದ ನಾಲ್ಕು ದಿಕ್ಕುಗಳಲ್ಲೂ ಆತ್ಮ ವಿಶ್ವಾಸ ಹೆಚ್ಚಿದೆ. ಭಾರತೀಯರಲ್ಲಿ ಈಗ ಹೊಸ ಭರವಸೆ ಮೂಡಿದೆ. ದೇಶದಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ಯುವಕರಲ್ಲಿ ಉದ್ಯೋಗವಕಾಶ ಹೆಚ್ಚುತ್ತಿದೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತಿದೆ. ದೇಶದಲ್ಲಿ ಈಗ ಉತ್ಸಾಹ ಹುಮ್ಮಸ್ಸಿನ ವಾತಾವರಣ ಇದೆ.  ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಸಕರಾತ್ಮಕ ವಾತಾವರಣ ಇದೆ. ವ್ಯಾಪಾರ ವಹಿವಾಟು ಮತ್ತಷ್ಟು ಚುರುಕುಗೊಂಡಿದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಪಾಸಿಟಿವ್ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

Key words: India – model – whole world –vaccination-PM -Modi.

ENGLISH SUMMARY…

India has set an example to the entire world through the COVID vaccination drive: PM Modi
New Delhi, October 22, 2021 (www.justkannada.in): “India is now a model to the entire world in giving vaccinations. We have become successful in our struggle against the COVID-19 Pandemic by completing giving 100 crore doses of the vaccine. I extend my heartfelt thanks to all those who are behind this success,” opined Prime Minister Narendra Modi.
He addressed the nation following the successful completion of applying 100 crore doses of COVID vaccination in the country. In his address, he said, “vaccination is being given to every person in the country. India has been successful in the fight against the pandemic. It is every Indian’s success. I extend my thanks to every citizen of the country. Today India has become a model for the entire country in vaccination. It reflects our country’s capability. The entire world is looking at us with open eyes,” he said.
Continuing, he said, completion of applying 100 crore doses of the vaccine is a reply to all the questions, like where will the Govt. of India bring money from? etc. “We have provided 100 crore doses in a very short period. India knows how to face difficult goals,” he added.
Keywords: Prime Minister Narendra Modi/ COVID-19 Pandemic/ vaccination/ 100 crore doses/ address the country