‘ಗಾಳಿಪಟ-2’ ರಿಲೀಸ್ ಗೆ ಕೌಂಟ್’ಡೌನ್: ಆಗಸ್ಟ್ 12 ವಿಶ್ವಾದ್ಯಂತ ಬಿಡುಗಡೆ

Promotion

ಬೆಂಗಳೂರು, ಆಗಸ್ಟ್ 03, 2022 (www.justkannada.in): ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ .

ನಿರ್ದೇಶಕ ಯೋಗರಾಜ್ ಭಟ್, ಚಿತ್ರದ ನಿರ್ದೇಶಕರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಮತ್ತೊಮ್ಮೆ ಈ ಚಿತ್ರ ಹೆಸರು ತಂದುಕೊಡಲಿದೆ ಎಂಬ ನಿರೀಕ್ಷೆ ಮೂಡಿದೆ.

ಈಗಾಗಲೇ ಈ ಚಿತ್ರದ ನಾಲ್ಕು ಹಾಡುಗಳು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿವೆ. ಜತೆಗೆ ಮೊನ್ನೆ ತಾನೇ ರಿಲೀಸ್ ಆದ ಟ್ರೈಲರ್ ಕೂಡ ಪ್ರೇಕ್ಷಕರ ಮನಗೆದ್ದಿದೆ.

ಈ ಚಿತ್ರವನ್ನು ಇಡೀ ಕುಟುಂಬ ಕುಳಿತು ನೋಡಬಹುದಾಗಿದೆ. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ನಾಯಕ ಗಣೇಶ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಉಳಿದಂತೆ ಅನಂತ್‌ ನಾಗ್, ದಿಗಂತ್, ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾ‌ ರಾವ್ ಇತರರು ನಟಿಸಿದ್ದಾರೆ.