ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯದಿದ್ದರೇ ರಾಜ್ಯಕ್ಕೆ ಮಾಡಿದ ಅನ್ಯಾಯ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ.

Promotion

ಕೊಪ್ಪಳ,ಡಿಸೆಂಬರ್,16,2022(www.justkannada.in): ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯದಿದ್ರೆ ರಾಜ್ಯಕ್ಕೆ ಅನ್ಯಾಯ ಮಾಡಿದಂಗೆ ಆಗುತ್ತ.  ಅಭಿವೃದ್ಧಿಯಲ್ಲಿ ರಾಜ್ಯ ಇನ್ನೂ 10 ವರ್ಷ ಹಿಂದೆ ಹೋಗುತ್ತೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಎಸ್ ವೈ ಅವರನ್ನ ಸುಮ್ಮನೇ ಸಿಎಂಸ್ಥಾನದಿಂದ ಕೆಳಗಿಳಿಸಿದರು. ಯಡಿಯೂರಪ್ಪರನ್ನ ಕೆಳಗಿಳಿಸಿ ಬೊಮ್ಮಾಯಿ ಸಿಎಂ ಮಾಡಿದ್ದಾರೆ. ಆರ್ ಎಸ್ ಎಸ್ ಸೂಚಿಸಿದಂತೆ ಕೇಳುವವರು ಸಿಎಂ ಆಗಿರಬೇಕು. ಅದಕ್ಕಾಗೇ ಸಿಎಂ ಸ್ಥಾನದಲ್ಲಿ ಬೊಮ್ಮಾಯಿಯನ್ನ ಕೂರಿಸಿದರು. ಆರ್ ಎಸ್ ಕುಳಿತುಕೋ ಅಂದ್ರೆ ಕೂರಬೇಕು ನಿಲ್ಲು ಎಂದರೇ ನಿಲ್ಲಬೇಕು.  ಆದರೆ ಇವರಿಗೆಲ್ಲಾ ಮೋದಿ ಹೆಡ್ ಮಾಸ್ಟರ್, ಅಮಿತ್ ಶಾ ಅಸಿಸ್ಟೆಂಟ್ ಹೆಡ್ ಮಾಸ್ಟರ್ ಎಂದು ಲೇವಡಿ ಮಾಡಿದರು.

ರಾಜ್ಯದ ಬಿಜೆಪಿ ಸಂಸದರು ರಣಹೇಡಿಗಳು. ನರೇಂದ್ರ ಮೋದಿ ಜನರ ಮನಸು ಒಡೆದಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. 2023ರಲ್ಲಿ ಬಿಜಪಿ ಸರ್ಕಾರ ಕಿತ್ತಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು.

Key words:  corrupt- BJP- government – injustice – state -Former CM -Siddaramaiah