ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢ….

Promotion

ಬೆಂಗಳೂರು,ಮಾ,18,2020(www.justkannada.in):   ಬೆಂಗಳೂರಿನಲ್ಲಿ ಮತ್ತಿಬ್ಬರಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.

ಸ್ಪೇನ್ ನಿಂದ ಬಂದಿದ್ದ 25 ವರ್ಷದ ಮಹಿಳೆಗೆ ಮತ್ತು ಅಮೇರಿಕಾದಿಂದ ಬಂದಿದ್ದ 56 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ಕೊರೋನಾ ಪತ್ತೆ ಪರೀಕ್ಷೆಯಿಂದ ದೃಢ.ವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಒಬ್ಬರು 56 ವಯಸ್ಸು, ಯುಎಸ್ ಎ ಪ್ರವಾಸದಿಂದ ಮಾರ್ಚ್6 ರಂದು ಹಿಂದಿರುಗಿದ್ದರು. ಇನ್ನೊಬ್ಬರು 25 ವರ್ಷದ ಮಹಿಳೆಯು ಸ್ಪೇನ್ ಪ್ರವಾಸದಿಂದ  ಹಿಂದಿರುಗಿದ್ದು, ಇಬ್ಬರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ  ಇವರಿಬ್ಬರ ಜತೆ ಸಂಪರ್ಕದಲ್ಲಿದ್ದವರಿಗೆ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.  ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

 

56 year old male who had returned from US on March 6

25 year old female who had returned from Spain
Total cases in Karnataka is 13
Another 2 cases of COVID-19 in Bengaluru

Key words: Coronavirus –two-Bangalore- health-minister- sriramulu