ರೈತರಿಗೂ ತಟ್ಟಿದ ಕೊರೋನಾ ಸೋಂಕು ಎಫೆಕ್ಟ್: ತರಕಾರಿಗಳ ಬೆಲೆ ಭಾರಿ ಕುಸಿತ…

Promotion

ಬೆಂಗಳೂರು,ಮಾ,9,2020(www.justkannada.in):  ಪ್ರಪಂಚದಾದ್ಯಂತ ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೋನಾ ವೈರಸ್ ಎಫೆಕ್ಟ್ ರೈತರಿಗೂ ತಟ್ಟಿದೆ. ಕೊರೋನಾ ಎಫೆಕ್ಟ್ ನಿಂದಾಗಿ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ.

1 ಕೆಜಿ ಬಿಟ್ ರೋಟ್ ಬೆಲೆ 10 ರೂ, ಮೆಣಸಿನ ಕಾಯಿ 10 ರೂ, ಕ್ಯಾರೇಟ್ 1 ಕೆಜಿಗೆ 20 ರೂ, ಬೀನ್ಸ್ 20 ರೂ. ನುಗ್ಗೇಕಾಯಿ 20 ರೂ, ಅಲೋಗೆಡ್ಡೆ ಕೆ.ಜಿಗೆ  18 ರೂ, ತೊಂಡೇಕಾಯಿ ಕೆ.ಜಿಗೆ 10 ರೂಪಾಯಿಗೆ ಕುಸಿದಿದೆ. ಕೊರೋನಾ ಎಫೆಕ್ಟ್ ನಿಂದಾಗಿ ಬೇರೆ ರಾಜ್ಯಕ್ಕೆ ತರಕಾರಿ ರಫ್ತಾಗದ ಹಿನ್ನೆಲೆ ಬೆಲೆ  ತರಕಾರಿ ಬೆಲೆ ಇಳಿಕೆ ಕಂಡಿದೆ.

Key words: Coronavirus-Effect – Farmers-Vegetable –prices- Decrease