Saturday, September 12, 2026

BDA Apartments

ನನ್ನ ಮಗ ನನಗಿಂತ ಸಖತ್ತಾಗಿ ಕಿಸ್ ಮಾಡ್ತಾನೆ ಎಂದ ಕ್ರೇಜಿಸ್ಟಾರ್ ! BDA JK_Adv BDA Adv
Home Cinema ನನ್ನ ಮಗ ನನಗಿಂತ ಸಖತ್ತಾಗಿ ಕಿಸ್ ಮಾಡ್ತಾನೆ ಎಂದ ಕ್ರೇಜಿಸ್ಟಾರ್ !

ನನ್ನ ಮಗ ನನಗಿಂತ ಸಖತ್ತಾಗಿ ಕಿಸ್ ಮಾಡ್ತಾನೆ ಎಂದ ಕ್ರೇಜಿಸ್ಟಾರ್ !

ಬೆಂಗಳೂರು, ಮಾರ್ಚ್ 09, 2020 (www.justkannada.in): ‘ಪ್ರಾರಂಭ’ ಸಿನಿಮಾದ ಹಾಡುಗಳ ರಿಲೀಸ್ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಗನ ಅಭಿನಯವನ್ನು ಕೊಂಡಾಡಿದ್ದಾರೆ.

ಮಗನ ಸಿನಿಮಾ ಹುಷಾರಾಗಿ ಮಾತನಾಡಿ ಎಂದು ಹೇಳಿಕೊಂಡೆ ನನ್ನ ಪತ್ನಿ ಕರೆದುಕೊಂಡು ಬಂದಿದ್ದಾರೆ ಎಂದು ಮಾತು ಶುರುಮಾಡಿದ ಕ್ರೇಜಿಸ್ಟಾರ್, ನನಗೆ ಮನು ಸಿನಿಮಾ, ಬೇರೆಯವರ ಸಿನಿಮಾ ಎನ್ನುವುದು ತಲೆಯಲ್ಲಿ ಇರುವುದಿಲ್ಲ. ಪಿಕ್ಟರ್ ಎನ್ನುವುದು ಮಾತ್ರ ತಲೆಯಲ್ಲಿ ಇರುತ್ತೆ ಎಂದರು.

ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡುತ್ತಾನೆ. ನನಗಿಂತ ಚೆನ್ನಾಗಿ ಸಿಗರೇಟು ಸೇದುತಾನೆ. ನಾನು ಇಷ್ಟೊಂದು ಚೆನ್ನಾಗಿ ಮಾಡಿರಲಿಲ್ಲ. ನನಗಿಂತ ಏನು ಕಮ್ಮಿ ಇಲ್ಲ ಎನ್ನುವುದು ತೆರೆ ಮೇಲೆ ಕಾಣುತ್ತಿದೆ ಎಂದು ಮಗನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.