ಕಲ್ಬುರ್ಗಿಯಲ್ಲಿ ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕೊರೋನಾ ಸೋಂಕು…

ಕಲ್ಬುರ್ಗಿ,ಮಾ,17,2020(www.justkannada.in): ಕಲಬುರಗಿಯಲ್ಲಿ ಮೂರನೇ ಕೊರೊನಾ ವೈರಸ್‌ ಪಾಸಿಟಿವ್ ದೃಢ ಪಟ್ಟಿದೆ.  ಕೊರೋನಾದಿಂದ ಮೃತಪಟ್ಟ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕೊರೋನಾ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ.

ಕೊರೋನಾದಿಂದ ಕಲಬುರಗಿ ವೃದ್ಧ ಸಾವನ್ನಪ್ಪಿದ್ದರು. ನಂತರ ಅವರ ಕುಟುಂಬದವರ ಮೇಲೆ ನಿಗಾ ಇಡಲಾಗಿತ್ತು.  ಆ ನಂತರ ವೃದ್ಧನ  ಕುಟುಂಬದ ಓರ್ವರಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು. ಇದೀಗ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ.

ವೈದ್ಯನ  ಕುಟುಂಬಸ್ಥರನ್ನ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದೆ. ಕೊರೋನಾ ಸೋಂಕಿತ ವೈದ್ಯರಿಗೆ ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು  ವೈದ್ಯ ಯಾರಿಗೆಲ್ಲಾ ಚಿಕಿತ್ಸೆ ನೀಡಿದ್ದಾರೆಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕೊರೋನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೆ ಸೋಂಕು ಇರುವುದು ಪತ್ತೆಯಾಗಿದೆ.  ರಾಜ್ಯದಲ್ಲಿ ಸೋಂಕು ಹೆಚ್ಚು ಕ್ವಾರೆಂಟೈನ್ ಗಳನ್ನ ತೆರೆಯಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

Key words: Coronavirus – doctor – treated – old man – Kalburgi.