ಕೊರೊನಾ ಸಂಕಷ್ಟ : ಪಬ್ಲಿಕ್ ಟಿವಿ ಸಂಪಾದಕ ಕಂ.ಮಾಲೀಕ ಎಚ್.ಆರ್.ರಂಗನಾಥ್ ಅಚ್ಚರಿ ನಡೆ…!

ಮೈಸೂರು,ಅಕ್ಟೋಬರ್,25,2020(www.justkannada.in) : ಕೊರೋನಾ ನಡುವೆ ಪತ್ರಿಕಾ ಸಂಸ್ಥೆಗಳಲ್ಲಿ ಆರ್ಥಿಕ ತಲ್ಲಣಗಳೇ ಉಂಟಾಗಿವೆ. ಈ ಸಂದರ್ಭ ಬಹಳಷ್ಟು ಪತ್ರಕರ್ತರು ಉದ್ಯೋಗ ಕಳೆದುಕೊಂಡಿದ್ದು, ಬಹಳಷ್ಟು ಸಂಸ್ಥೆಗಳು ತಮ್ಮ‌‌ ನೌಕರರ ಸಂಬಳ ಕಡಮೆ ಮಾಡಿದ್ದಾರೆ. ಆದರೆ, ಪಬ್ಲಿಕ್ ಟಿವಿ ಸಂಸ್ಥೆಯು ತನ್ನ ನೌಕರರಿಗೆ ಬೋನಸ್ ಮೇಲೆ ಬೋನಸ್ ಕೊಡುತ್ತಿದೆ ಎಂದು ಪತ್ರಕರ್ತ ಕೆ.ಪಿ.ನಾಗರಾಜ್ ಸಂತಸವ್ಯಕ್ತಪಡಿಸಿದ್ದಾರೆ.jk-logo-justkannada-logo

ಒಂದು ಉತ್ತಮ ಮಾದರಿ ನಮ್ಮ ಕಣ್ಮುಂದೆ ಇರಲಿ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಪಬ್ಲಿಕ್ ಟಿವಿಯ ಖಾಸಗಿ ವಿಚಾರವನ್ನು ನಿಮ್ಮ‌ ಮುಂದೆ ಹಂಚಿ ಕೊಳ್ಳುತ್ತಿದ್ದೆನೆ. ಕಳೆದ ಬಾರಿಯಂತೆ ಈ ಬಾರಿಯೂ ಸ್ಪಷ್ಟಪಡಿಸುತ್ತೀದ್ದೇನೆ, ಇದನ್ನು ಬರೆಯುತ್ತಿರುವುದು ಯಾರಿಗೋ ಟಾಂಗ್ ಕೊಡಲಿಕ್ಕೆ ಅಲ್ಲ. ಬದಲಾಗಿ ಒಂದು ಉತ್ತಮ ಮಾದರಿ ನಮ್ಮ ಕಣ್ಮುಂದೆ ಇರಲಿ ಎಂಬ ಕಾರಣಕ್ಕಷ್ಟೆ ಬರೆಯುತ್ತಿದ್ದೇನೆ‌ ಎಂದು ಪತ್ರಕರ್ತ ಕೆ.ಪಿ. ನಾಗರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಸಂಬಳ ಹೆಚ್ಚು, ಆರು ತಿಂಗಳ ಅರಿಯರ್ಸ್ 

ಕೊರೋನಾ ವೇಳೆ ಧೈರ್ಯದಿಂದ ಎಲ್ಲಾ ಸಿಬ್ಬಂದಿ ಕೆಲಸ ಮಾಡಿದ್ದರು ಎಂದು ಮೂರು ತಿಂಗಳ ಹಿಂದೆ ಎಲ್ಲರಿಗೂ ತಲಾ 10 ಸಾವಿರ ಬೋನಸ್ ನೀಡಲಾಗಿತ್ತು. ಈಗ ಪ್ರತಿ ವರ್ಷ ಸಂಬಳ ಹೆಚ್ಚು ಮಾಡುವ ರೀತಿಯಲ್ಲೆ ಈ ವರ್ಷವೂ ಎಲ್ಲಾ ನೌಕರರ ಸಂಬಳ ಹೆಚ್ಚು ಮಾಡಲಾಗಿದೆ. ಇಷ್ಟೇ ಅಲ್ಲ, ಆರು ತಿಂಗಳ ಅರಿಯರ್ಸ್ ಕೂಡ ಕೊಡಲಾಗ್ತಿದೆ. ಖುದ್ದು ಸಂಸ್ಥೆಯ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್ ಇದನ್ನು ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.

Corona,Hardship,Publick TV Editor,Co.Owner,HR Ranganath,marvels ...!

ನೌಕರರು ಬರೀ ನೌಕರರಲ್ಲ ಅವರು ತಮ್ಮ ಕುಟುಂಬದ ಸದಸ್ಯರು

ಒಂದು ಸಂಸ್ಥೆಯ ಮುಖ್ಯಸ್ಥರಿಗೆ ಆರ್ಥಿಕ ಶಿಸ್ತು ಇದ್ದಾಗ, ಸಂಸ್ಥೆಯ ನೌಕರರು ಬರೀ ನೌಕರರಲ್ಲ ಅವರು ತಮ್ಮ ಕುಟುಂಬದ ಸದಸ್ಯರು ಎಂಬ ಮನೋಭಾವ ಇದ್ದಾಗ ಇಂತಹ ತಲ್ಲಣಗಳ ನಡುವೆಯೂ ತಮ್ಮ ಸಂಸ್ಥೆಯ ನೌಕರರ ರಕ್ಷಣೆ ಆಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದಿದ್ದಾರೆ.

ಒಬ್ಬ ನೌಕರರನ್ನು ಕೆಲಸದಿಂದ ತೆಗೆದಿಲ್ಲ‌. ಒಬ್ಬರ ಸಂಬಳಕ್ಕೂ ಕತ್ತರಿ ಹಾಕಿಲ್ಲ

ಸಂಸ್ಥೆಯ ನೌಕರರ ಕೆಲಸದಿಂದ ತೆಗೆಯಲು, ಸಂಬಳಕ್ಕೆ ಕತ್ತರಿ ಹಾಕಲು, ಸಂಬಳ ಹೈಕ್ ಫೋಸ್ಟ್ ಫೋನ್ ಮಾಡುವುದಕ್ಕೆ ಕರೋನಾಕ್ಕಿಂತ ದೊಡ್ಡ ಕಾರಣ ಬೇಡವೇ ಬೇಡ. ಆದರೂ, ಎಚ್.ಆರ್.ರಂಗನಾಥ್ ಅವರು  ಒಬ್ಬ ನೌಕರರನ್ನು ಕೆಲಸದಿಂದ ತೆಗೆದಿಲ್ಲ‌. ಒಬ್ಬರ ಸಂಬಳಕ್ಕೂ ಕತ್ತರಿ ಹಾಕಿಲ್ಲ. ಇದರ ಬದಲು ಬೋನಸ್, ಸಂಬಳ ಹೈಕ್ ಮಾಡುವ ಕೆಲಸ ಮಾಡಿದ್ದಾರೆ. ಇದು ಅವರಿಗೆ ತಮ್ಮ ಸಂಸ್ಥೆಯ ನೌಕರರ ಮೇಲಿನ ಪ್ರೀತಿ, ಕಾಳಜಿಗೆ ಸಾಕ್ಷಿ!.‌ ಇಂತಹ ಮಾದರಿಗಳು ಪತ್ರಿಕೋದ್ಯಮದಲ್ಲಿ ಹೆಚ್ಚಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

Corona,Hardship,Publick TV Editor,Co.Owner,HR Ranganath,marvels ...!

key words : Corona-Hardship-Publick TV Editor-Co.Owner-HR Ranganath-marvels …!