ಕೊರೋನಾ ತಡೆಗೆ ಎಸ್ ಡಿಆರ್ ಎಫ್ ನಿಧಿ ಬಳಸಿ ಅಗತ್ಯ ಕ್ರಮ ಕೈಗೊಳ್ಳಿ- ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ…

Promotion

ನವದೆಹಲಿ,ಮಾ,14,2020(www.justkannada.in):  ವಿಶ್ವದೆಲ್ಲಡೆ ಸಂಚಲನ ಸೃಷ್ಠಿಸಿರುವ ಮಹಾಮಾರಿ ಕೊರೋನಾ ತಡೆಗಟ್ಟಲು ಎಸ್ ಡಿಆರ್ ಎಫ್ ನಿಧಿ ಬಳಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಕೊರೊನಾ ಸೋಂಕು ತಡೆಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯನ್ನು ಬಳಸಿಕೊಳ್ಳುವಂತೆ  ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಮಾರಕ ಕೊರೊನಾ ಸೋಂಕು ವಿಶ್ವವ್ಯಾಪಿಯಾಗಿದ್ದು, ಆರಂಭದಲ್ಲೇ ಇದನ್ನು ತಡೆಯುವುದು ಅತ್ಯಗತ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಕೆಲ ನಿರ್ದೇಶನಗಳನ್ನು ರವಾನಿಸಿದೆ.

ಈ ಕುರಿತು ಅಯಾ ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ನಿರ್ದೇಶಿಸಿರುವ ಕೇಂದ್ರ ಸರ್ಕಾರ, ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಇನ್ನು ಸೋಂಕಿತರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು, ಪೊಲೀಸರು, ವೈದ್ಯರು, ಕಾರ್ಪೋರೇಶನ್, ಅಗ್ನಿಶಾಮಕ ಸಿಬ್ಬಂದಿಗಳಿಗೆ ಪಿಪಿ ಕಿಟ್ (ಸ್ವಯಂರಕ್ಷಣಾ ಕವಚ) ನೀಡುವಂತೆ ಸೂಚಿಸಿದೆ.

ಅಲ್ಲದೇ, ಸೋಂಕಿತರ ನಿಗಾ ಕೇಂದ್ರಗಳನ್ನು 30 ದಿನದೊಳಗೆ ತೆರೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸ್ಕ್ರೀನಿಂಗ್ ಬಗ್ಗೆ ರಾಜ್ಯ ಕಾರ್ಯಕಾರಿ ಸಮಿತಿ ನಿರ್ಧಾರ ಕೈಗೊಳ್ಳಲಿ. ಕೊರೊನಾ ಸೋಂಕು ಪತ್ತೆ ಹಚ್ಚಲು ಹೆಚ್ಚುವರಿ ಲ್ಯಾಬ್ ತೆರೆಯುವುದು, ಥರ್ಮಲ್ ಸ್ಕ್ಯಾನರ್, ಗಾಳಿ ಶುದ್ದೀಕರಣ ಯಂತ್ರ, ವೆಂಟಿಲೇಟರ್ ಯಂತ್ರಗಳನ್ನು ಖರೀದಿಸಲು ಎಸ್.ಡಿ.ಆರ್.ಎಫ್ ನಿಧಿಯನ್ನೇ ಬಳಸಿಕೊಳ್ಳಲು ಸೂಚಿಸಿದೆ.

Key words: corona virus-using – SDRF fund – prevent –Central government-instruct-States.