ಸದ್ಯದಲ್ಲೇ ಹೋಟೆಲ್  ಕೆಫೆ ಮೈಸೂರು ಸೀಲ್ ಡೌನ್…

Mysore-dc-hotel-cafe-Mysore-quarantine-corona
Promotion

ಮೈಸೂರು,ಜೂ,13,2020(www.justkannada.in):  ಮೈಸೂರಿನ ಇಟ್ಟಿಗೆಗೂಡಿನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದ ವ್ಯಕ್ತಿ ಕೆಫೆ ಮೈಸೂರು ಹೋಟೆಲ್ ಗೆ ಹೋಗಿದ್ದ ಹಿನ್ನೆಲೆ ಸದ್ಯದಲ್ಲೇ ಪಾಲಿಕೆ ಅಧಿಕಾರಿಗಳು ಹೋಟೆಲ್  ಕೆಫೆ ಮೈಸೂರು ಸೀಲ್ ಡೌನ್ ಮಾಡಲಿದ್ದಾರೆ.

ಇತ್ತೀಚೆಗಷ್ಟೇ ಇಟ್ಟಿಗೆಗೂಡಿನಲ್ಲಿ ತಮಿಳುನಾಡು ಟ್ರಾವೆಲ್ ಹಿಸ್ಟರಿ ಹೊಂದಿದ್ದ ವ್ಯಕ್ತಿಗೆ ಸೋಂಕು ಪತ್ತೆಯಾಗಿತ್ತು. ಆ ವ್ಯಕ್ತಿ ಕೆಫೆ ಮೈಸೂರು ಹೋಟೆಲ್ ಗೆ ಭೇಟಿ ನೀಡಿದ್ದರು.ಹೀಗಾಗಿ ಹೋಟೆಲ್ ನ ಮಾಲೀಕರು ಸೇರಿ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿತ್ತು.corona-virus-mysore-hotel-cafe-seal-down

ಈ ನಡುವೆ ನಾಲ್ವರಲ್ಲಿ ಇಬ್ಬರಿಗೆ ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇಂದು ಪಾಲಿಕೆ ಅಧಿಕಾರಿಗಳು ಕೆಫೆ ಮೈಸೂರು ಮುಂಭಾಗ ರಸ್ತೆಯನ್ನು ಸೀಲ್ ಡೌನ್ ಮಾಡಲಿದ್ದಾರೆ.

Key words: corona virus-Mysore -Hotel Cafe- Seal Down