ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್- ರಾಜ್ಯ ಸರ್ಕಾರ ಆದೇಶ…

Promotion

ಬೆಂಗಳೂರು,ಜನವರಿ,23,2021(www.justkannada.in):  ದೇಶದಲ್ಲಿ ಕೊರೋನಾ ಲಸಿಕೆ ಕಂಡು ಹಿಡಿದ ಬಳಿಕ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ಇದೀಗ ವಿಮಾನ ನಿಲ್ದಾಣ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಆದೇಶ ಹೊರಡಿಸಿದೆ.jk

ಇಲ್ಲಿಯವರೆಗೆ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರವಷ್ಟೇ ಕೊರೊನಾ ಲಸಿಕೆ ಮೀಸಲಾಗಿತ್ತು, ಇದೀಗ ಆರೋಗ್ಯ ಕಾರ್ಯಕರ್ತರ ಜೊತೆ ವಿಮಾನ ನಿಲ್ದಾಣ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡುವ ಬಗ್ಗೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಆಯುಕ್ತರು ನೂತನ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಫ್ರಂಟ್ ಲೈನ್ ವರ್ಕರ್ಸ್ ಗಳೆಂದು ಪರಿಗಣಿಸಲಾಗಿದೆ.Corona vaccine – all- airport- staff - ordered - state government.

ಈ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳ  ಎಲ್ಲಾ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತದೆ. ಸರ್ಕಾರದ ನೂತನ ಆದೇಶದಿಂದ ಮಂಡಕ್ಕಳ್ಳಿ ವಿಮಾನ ನಿಲ್ದಾಣದ ಸಿಬ್ಬಂದಿಗೂ  ಲಸಿಕೆ ಭಾಗ್ಯ ದೊರೆಯಲಿದೆ.

Key words: Corona vaccine – all- airport- staff – ordered – state government.