ಎಸ್ ಎಸ್ ಎಲ್ ಸಿ ಪರೀಕ್ಷೆ ಮೇಲೆ ಬೀಳುತ್ತಾ ಕರೋನಾ ಕರಿನೆರಳು..? ಕಂಟೈನ್ಮೆಟ್ ಝೋನ್‌  ಹತ್ತಿರದಲ್ಲೇ ಪರೀಕ್ಷಾ ಕೇಂದ್ರಗಳು….

ಮೈಸೂರು,ಜೂ,22,2020(www.justkannada.in):  ರಾಜ್ಯದಲ್ಲಿ ಜೂನ್ 25 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಶುರುವಾಗಲಿದೆ. ಈ ನಡುವೆ ರಾಜ್ಯದಲ್ಲಿ ಇತ್ತೀಚೆಗೆ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು ಮೈಸೂರಿನಲ್ಲಿ ಕಂಟೈನ್ಮೆಟ್ ಝೋನ್ ವ್ಯಾಪ್ತಿಯಲ್ಲಿ ಹತ್ತಿರದಲ್ಲೆ ಪರೀಕ್ಷಾ ಕೇಂದ್ರಗಳಿವೆ.Corona -SSLC exam –mysore- containment zone.

ಹೌದು, ನಗರದಲ್ಲಿ ಕಂಟೈನ್ಮೆಟ್ ಝೋನ್ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಮಧ್ಯೆ ಕಂಟೈನ್ಮೆಟ್ ಝೋನ್ ವ್ಯಾಪ್ತಿ ಹತ್ತಿರದಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿವೆ. ಮರಿಮಲ್ಲಪ್ಪ, ಸದ್ವಿದ್ಯಾ ಶಾಲೆಗಳು ಕಂಟೈನ್ಮೆಟ್ ಝೋನ್‌ ಕೂಗಳತೆ ದೂರದಲ್ಲಿದೆ. ಹಾಗೆಯೇ  ಲಕ್ಷ್ಮಿವಿಲಾಸ ರಸ್ತೆ ಈಗ ಸೀಲ್ ಡೌನ್ ಆಗಿದೆ. ಈ ಲಕ್ಷ್ಮಿ ವಿಲಾಸ ರಸ್ತೆಯಲ್ಲಿ  ಮಹಾರಾಣಿ ಪ್ರೌಢಶಾಲೆ ಇದೆ.

ಹೀಗಾಗಿ ಪೋಷಕರ ಎದೆಯಲ್ಲಿ ಆತಂಕ ಶುರುವಾಗಿದ್ದು  ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರುತ್ತಾರಾ ಎಂಬ ಪ್ರಶ್ನೆ ಉದ್ಬವಿಸಿದೆ. ಇನ್ನು ಕೊರೊನಾಗೆ ಹೆದರಿ ಪೋಷಕರು ತಮ್ಮ ಮಕ್ಕಳನ್ನ ಮನೆಯಲ್ಲಿಯೇ  ಉಳಿಸಿಕೊಳ್ಳುತ್ತಾರಾ ಅಥವಾ ಅಧಿಕಾರಿಗಳು ಪರೀಕ್ಷಾ ಕೇಂದ್ರವನ್ನು ಬದಲಿಸುವ ವ್ಯವಸ್ಥೆ ಮಾಡ್ತಾರಾ ಕಾದು ನೋಡಬೇಕಿದೆ. ಶಿಕ್ಷಣ ಇಲಾಖೆ ಎಷ್ಟೇ  ಮುಂಜಾಗ್ರತಾ ಕ್ರಮ ಕೈಗೊಂಡರೂ ಪೋಷಕರಲ್ಲಿ ಕೊರೊನಾ ಭಯ ಆವರಿಸಿದೆ.

Key words: Corona -SSLC exam –mysore- containment zone.