ಮಾಜಿ ಸಚಿವ ಎಚ್. ವಿಶ್ವನಾಥ್ ರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡುವಂತೆ ಒತ್ತಾಯ…

ಮೈಸೂರು,ಜೂ,22,2020(www.justkannada.in): ಮಾಜಿ ಸಚಿವ ಎಚ್. ವಿಶ್ವನಾಥ್ ರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡುವಂತೆ  ಹಳೇಬೇರು ಹೊಸಚಿಗುರು ಗಾಯಕರ ಗೆಳೆಯರ ಬಳಗದ ವತಿಯಿಂದ ಒತ್ತಾಯಿಸಲಾಗಿದೆ.

ಪತ್ರಕರ್ತರ ಭವನದಲ್ಲಿ ಹಳೇಬೇರು ಹೊಸಚಿಗುರು ಗಾಯಕರ ಗೆಳೆಯರ ಬಳಗ ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ಎಚ್. ವಿಶ್ವನಾಥ್ ರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡುವಂತೆ  ಸಿಎಂ ಯಡಿಯೂರಪ್ಪರವರಿಗೆ ಒತ್ತಾಯಿಸಿದೆ.

ಸುದ್ದಿಗೋಷ್ಠಿ ವೇಳೆ ರೇವಣ್ಣ ಎಂಬುವವರು ಮಾತನಾಡಿ, ಹೆಚ್. ವಿಶ್ವನಾಥ್ ಅವರ ರಾಜಕೀಯ ಅನುಭವ ವಿಧಾನ ಪರಿಷತ್ ಗೆ ಅವಶ್ಯಕತೆ ಇದೆ. ಕನ್ನಡ ಸಂಸ್ಕೃತಿ ಇಲಾಖೆ ಅಸ್ತಿತ್ವವೇ ಇಲ್ಲದ ಸಮಯದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಭಿವೃದ್ಧಿ ಮಾಡಿದ್ದಾರೆ. ಹೆಚ್. ವಿಶ್ವನಾಥ್ ಅವರು ಸ್ವತಃ ಸಾಹಿತಿಗಳಾಗಿದ್ದು ಸುಮಾರು 10 ಪುಸ್ತಕಗಳನ್ನು ಬರೆದಿದ್ದಾರೆ. ಆದ್ದರಿಂದ ಹೆಚ್. ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದ ಕೋಟಾದಡಿ ನಾಮ ನಿರ್ದೇಶನ ಮಾಡುವಂತೆ ಆಗ್ರಹಿಸಿದರು. Former Minister- H Vishwanath – nominate-MLC-position-mysore

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಬನ್ನೂರು ಕೆ. ರಾಜು, ಕನ್ನಡಪರ ಹೋರಾಟಗಾರ ರಾಮಚಂದ್ರ ಆಚಾರ್, ವಕೀಲ ಟಿ. ನಾಗರಾಜ್ ಉಪಸ್ಥಿತರಿದ್ದರು.

Key words: Former Minister- H Vishwanath – nominate-MLC-position-mysore