ಶಾಸಕ ರಾಮಪ್ಪ ಪುತ್ರಿ ವಿವಾಹದಲ್ಲಿ ಕೊರೊನಾ ರೂಲ್ಸ್ ಬ್ರೇಕ್: ಅಧಿಕಾರಿಗಳಿಗೆ ಡಿಸಿ ನೊಟೀಸ್.

Promotion

ದಾವಣಗೆರೆ,ಜುಲೈ,3,2021(www.justkannada.in): ಹರಿಹರ ಶಾಸಕ ರಾಮಪ್ಪ ಅವರ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಕೊರೋನಾ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಕಾರಣ ಕೇಳಿ ಅಧಿಕಾರಿಗಳಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಂತೇಶ್ ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ.jk

ನಿನ್ನೆ  ಹರಿಹರದಲ್ಲಿ  ಶಾಸಕ ರಾಮಪ್ಪ ಪುತ್ರಿ ವಿವಾಹ ಕಾರ್ಯಕ್ರಮ ನೆರವೇರಿತು. ಈ ಮದುವೆ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿ ಹಲವು ರಾಜಕೀಯ ನಾಯಕರು ಪಾಲ್ಗೊಂಡಿದ್ಧರು. ಈ ಮಧ್ಯೆ ವಿವಾಹ ಕಾರ್ಯಕ್ರಮದ ವೇಳೆ 40 ಜನಕ್ಕಿಂತ ಸೇರಬಾರದು ಎಂಬ ನಿಯಮವಿದೆ. ಆದರೆ ಶಾಸಕ ರಾಮಪ್ಪ ಮಗಳ ಮದುವೆಯಲ್ಲಿ 40ಕ್ಕಿಂತ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಹಾಗೆಯೇ ದೈಹಿಕ ಅಂತರವನ್ನು ಪಾಲಿಸಿಲ್ಲ ಎನ್ನಲಾಗಿತ್ತು.

ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ವರದಿ ಆಧರಿಸಿ ಹರಿಹರ ತಹಶೀಲ್ದಾರ್,  ನಗರಸಭೆ ಆಯುಕ್ತರು, ಸಿಪಿಐ, ಸೇರಿ ಅಧಿಕಾರಿಗಳಿಗೆ ದಾವಣಗೆರೆ ಡಿಸಿ ಮಹಂತೇಶ್ ಬಿಳಗಿ ನೊಟೀಸ್ ನೀಡಿದ್ದಾರೆ ಎನ್ನಲಾಗಿದೆ.

Key words: Corona -Rules -Break – harihar -MLA –Ramappa- Daughter­ Marriage