ಮಹಿಳೆಗೆ ಕೊರೋನಾ ಪಾಸಿಟಿವ್: ಮೈಸೂರಿನಲ್ಲಿ ರಸ್ತೆ ಸೀಲ್ ಡೌನ್…

Promotion

ಮೈಸೂರು,ಜೂ,30,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಓರ್ವ ಮಹಿಳೆಗೆ ಕೊರೊನಾ  ಸೋಂಕಿರುವುದು ದೃಢವಾಗಿದೆ.corona-positive-woman-seal-down-mysore

ನಾರಾಯಣ ಶಾಸ್ತ್ರಿ ರಸ್ತೆ ಬಳಿ ಇರುವ ಕುಂಬಾರಗೇರಿಯಲ್ಲಿ 40 ವರ್ಷ ವಯಸ್ಸಿನ ಮಹಿಳೆಗೆ ಕೊರೋನಾ ಸೋಂಕು ಧೃಢವಾಗಿದ್ದು ಈ ಹಿನ್ನೆಲೆ ಕುಂಬಾರಗೇರಿ ಮೊದಲ ಮುಖ್ಯರಸ್ತೆಯ 1ನೇ ಕ್ರಾಸ್ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ಮಹಿಳೆಯ ಕುಟುಂಬದ ಸದಸ್ಯರನ್ನ ಕ್ವಾರೆಂಟೈನ್ ಮಾಡಲಾಗಿದೆ.

25 ಮನೆಗಳಿರುವ ರಸ್ತೆಯನ್ನ ಸೀಲ್ ಡೌನ್ ಮಾಡಲಾಗಿದ್ದು ರಸ್ತೆಯ ಎರಡೂ ಬದಿಗೆ ಬ್ಯಾರಿಕೇಡ್ ನಿರ್ಮಿಸಲಾಗಿದೆ.

Key words:  Corona positive – woman-seal down – Mysore.