ಮೈಸೂರು ಪೊಲೀಸ್ ಆಯುಕ್ತರಿಗೆ ವಕ್ಕರಿಸಿದ ಮಹಾಮಾರಿ ಕೊರೋನಾ…

Promotion

ಮೈಸೂರು,ಆ,25,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರು ಸೇರಿ ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು  ಇತ್ತೀಚೆಗೆ ವೈದ್ಯರು, ಪೊಲೀಸರು, ರಾಜಕಾರಣಿಗಳು ಕಲಾವಿದರು ಸೇರಿದಂತೆ ಎಲ್ಲಾ ವರ್ಗದವರಿಗೂ ಮಹಾಮಾರಿ ಕೊರೋನಾ ಹರಡುತ್ತಿದೆ.jk-logo-justkannada-logo

ಈ ನಡುವೆ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೂ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಎರಡು ದಿನಗಳ ಹಿಂದೆ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಸ್ಯಾಂಪಲ್ ನೀಡಿದ್ದರು.  ನಿನ್ನೆ ಬಂದ ವರದಿಯಲ್ಲಿ ಚಂದ್ರಗುಪ್ತ ಅವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.corona-positive-mysore-police-commissioner

ಪೊಲೀಸ್ ಆಯುಕ್ತರ‌ ಜೊತೆ ಎನ್. ಆರ್ ವಿಭಾಗದ ಎಸಿಪಿ  ಶಿವಶಂಕರ್‌ ಅವರಿಗೂ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇನ್ನು ಸೋಂಕು ದೃಢಪಟ್ಟ ಹಿನ್ನೆಲೆ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.  ಎಸಿಪಿ ಶಿವಶಂಕರ್ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Key words: Corona – positive-Mysore -Police Commissioner