ಕೊರೊನಾ ಭೀತಿ: ರಾಜ್ಯಸಭೆ ಚುನಾವಣೆ ಮುಂದೂಡಿಕೆ

Promotion

ನವದೆಹಲಿ, ಮಾರ್ಚ್ 24, 2020 (www.justkannada.in): ಮಾ.26ಕ್ಕೆ ನಿಗಧಿಯಾಗಿದ್ದ ‘ರಾಜ್ಯಸಭೆ ಚುನಾವಣೆ’ ಮುಂದೂಡಲಾಗಿದೆ.

ರಾಜ್ಯ ವಿಧಾನ ಸಭೆಗಳಿಂದ ರಾಜ್ಯಸಭೆಯ 55 ಸ್ಥಾನಗಳಿಗೆ ಮಾರ್ಚ್ 26ರಂದು ಚುನಾವಣೆ ನಡೆಯಲು ನಿರ್ಧರಿಸಲಾಗಿತ್ತು. ಅಲ್ಲದೇ ಮತ ಎಣಿಕೆ ಅದೇ ದಿನ ಸಂಜೆ ನಡೆದು ಫಲಿತಾಂಶ ಪ್ರಕಟವಾಗುತ್ತಿತ್ತು. ಆದ್ರೇ.. ಈ ಚುನಾವಣೆಯನ್ನು ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಮುಂದೂಡಲಾಗಿದೆ.

ವಿಧಾನಸಭೆಗಳಿಂದ ರಾಜ್ಯಸಭೆಯ 55 ಸ್ಥಾನಗಳಿಗೆ ಮಾರ್ಚ್‌ 26ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಈಗಾಗಲೇ ಹತ್ತು ರಾಜ್ಯಗಳಿಂದ 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 7 ರಾಜ್ಯಗಳಿಂದ 18 ಸದಸ್ಯರ ಆಯ್ಕೆಗಾಗಿ ಮಾರ್ಚ್‌ 26ರಂದು ಚುನಾವಣೆ ನಡೆಯಲು ಚುನಾವಣೆ ದಿನಾಂಕ ಪ್ರಕಟಿಸಲಾಗಿತ್ತು.