ಮೈಸೂರು ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ ವೈದ್ಯ ಬಲಿ….

Promotion

ಮೈಸೂರು,ಸೆಪ್ಟಂಬರ್,23,2020(www.justkannada.in):  ಮೈಸೂರು ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ ಮತ್ತೋರ್ವ ಕೊರೋನಾ ವಾರಿಯರ್ ಬಲಿಯಾಗಿದ್ದಾರೆ.jk-logo-justkannada-logo

ಡಾ. ವೆಂಕಟೇಶ್ (66) ಕೊರೊನಾಗೆ ಬಲಿಯಾದ ಮೃತ ವೈದ್ಯ. ಡಾ. ವೆಂಕಟೇಶ್ ನಂಜನಗೂಡಿನ ಪ್ರಗತಿ ಲೇ ಔಟ್ ನಲ್ಲಿ ವಾಸವಾಗಿದ್ದರು. ನಂಜನಗೂಡಿನ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಡಾ. ವೆಂಕಟೇಶ್ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು.

ಕೊರೋನಾ ಸೋಂಕು ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ  ಡಾ.ವೆಂಕಟೇಶ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೆಂಕಟೇಶ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ನಿನ್ನೆ ಒಂದೇ ದಿನ 6,974 ಹೊಸ ಕೊರೊನಾ ವೈರಸ್  ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ಈ ಮೂಲಕ ರಾಜ್ಯದಲ್ಲಿ  ಕೊರೊನಾ ಸೋಂಕಿತರ ಸಂಖ್ಯೆ ಐದು ಲಕ್ಷ 33 ಸಾವಿರದ ಗಡಿ ದಾಟಿದೆ.

Key words:  Corona – Mysore –District-death- doctor