ಕೊರೋನಾ ಹೆಚ್ಚಳ: ವೆಂಟಿಲೇಟರ್ ಮತ್ತು ಅನುದಾನಕ್ಕಾಗಿ ಸಚಿವ ಎಸ್.ಟಿ ಸೋಮಶೇಖರ್ ಗೆ ಸಾ.ರಾ ಮಹೇಶ್ ಪತ್ರ…

Promotion

ಮೈಸೂರು,ಆ,3,2020(www.justkannada.in):  ಕೆ.ಆರ್.ನಗರ ಕ್ಷೇತ್ರದಲ್ಲಿ  ಕೊರೋನಾ ವ್ಯಾಪಕವಾಗಿ ಹರಡಿದೆ.  ಕೊರೋನಾ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಗೆ ಶಾಸಕ ಸಾ.ರಾ ಮಹೇಶ್ ಪತ್ರ ಬರೆದಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಶಾಸಕ ಸಾ.ರಾ ಮಹೇಶ್, ಕೆ.ಆರ್.ನಗರ ಕ್ಷೇತ್ರದಲ್ಲಿ ಕರೋನಾ ವ್ಯಾಪಕವಾಗಿ ಹರಡಿದೆ.ಕ್ಷೇತ್ರದಲ್ಲಿ 115 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೀಗಿರುವಾಗ ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಯ ವೆಂಟಿಲೇಟರ್ ಅನ್ನ ಮೈಸೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆ ಇದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಕೂಡಲೇ ವೆಂಟಿಲೇಟರ್ ಸಹಿತ ಅಗತ್ಯ ಸೌಲಭ್ಯ  ಒದಗಿಸುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಗೆ ಮನವಿ ಮಾಡಿದ್ದಾರೆ.corona-kr-nagar-sa-ra-mahesh-minister-st-somashekhar-ventilator

ಕೆ.ಆರ್.ನಗರ ಕ್ಷೇತ್ರಕ್ಕೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. 2020ರ ಮಾರ್ಚ್​ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಗೂ ಅನುದಾನ ಸಿಕ್ಕಿಲ್ಲ. ಅದ್ದರಿಂದ ಕೊರೋನಾ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡುವಂತೆ ಸಚಿವ ಎಸ್.ಟಿ ಸೋಮಶೇಖರ್ ಗೆ ಆಗ್ರಹಿಸಿದ್ದಾರೆ.

Key words: Corona –KR Nagar-sa.ra Mahesh – Minister- ST Somashekhar – Ventilator