ಕೊರೋನಾ ಸೋಂಕಿತ ಕೈದಿ ಕೋವಿಡ್ ಆಸ್ಪತ್ರೆಯಿಂದ ಎಸ್ಕೇಪ್….

ಮೈಸೂರು,ಆ,3,2020(www.justkannada.in):  ಕೊರೋನಾ ಸೋಂಕಿತ ವಿಚಾರಣಾಧೀನ ಕೈದಿಯೊಬ್ಬ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk-logo-justkannada-logo

ಕೊರೊನಾ ಸೋಂಕಿತ 21 ವರ್ಷದ ವಿಚಾರಣಾಧೀನ ಕೈದಿಯೊಬ್ಬ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ವಿಚಾರಣಾಧೀನ ಕೈದಿಯಾಗಿದ್ದ ಈತನನ್ನು ಶನಿವಾರ ರಾತ್ರಿಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈತ ಭಾನುವಾರ ಕಾಣೆಯಾಗಿದ್ದಾನೆ’ ಎಂದು ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ದೂರು ನೀಡಿದ್ದಾರೆ.Corona- Infected- Prisoner -Escape - Kovid Hospital-mysore

ಈ ಕುರಿತು ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮಂಡ್ಯ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಕಳ್ಳತನ ಪ್ರಕರಣದಲ್ಲಿ ವಿಚಾರಣಾಧೀನ‌ ಕೈದಿಯಾಗಿ ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದನು.

Key words: Corona- Infected- Prisoner -Escape – Kovid Hospital-mysore