ಕೊರೋನಾ ಎಫೆಕ್ಟ್: ಮೈಸೂರಿನ ಮಳಿಗೆಗಳಲ್ಲಿ ರಾರಾಜಿಸುತ್ತಿರುವ ‘ಫಾರ್ ರೆಂಟ್’  ಬೋರ್ಡ್…

Promotion

ಮೈಸೂರು,ಜೂ,19,2020(www.justkannada.in):  ವಿಶ್ವದೆಲ್ಲೆಡೆ ರಣಕೇಕೆ ಹಾಕುತ್ತಿರುವ ಮಹಾಮಾರಿ ಕೊರೋನಾ ದೇಶದಲ್ಲೂ ಅಟ್ಟಹಾಸ ಮೆರೆಯುತ್ತಿದೆ. ಈ ನಡುವೆ ಕೊರೋನಾ ತಡೆಗಟ್ಟಲು ಲಾಕ್ ಡೌನ್ ಘೋಷಿಸಿದ ಹಿನ್ನೆಲೆ ಕುಸಿದ ಆರ್ಥಿಕತೆಯನ್ನ ಮೇಲೆತ್ತಲು ಕೇಂದ್ರ, ರಾಜ್ಯ ಸರ್ಕಾರ ಯತ್ನಿಸುತ್ತಿವೆ.

ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿಗೂ ಕೊರೋನಾ ಎಫೆಕ್ಟ್ ತಟ್ಟಿದೆ. ಹೌದು ಕೊರೋನಾ ಏಟಿನಿಂದಾಗಿ ಮೈಸೂರಿನ ಪ್ರತಿಷ್ಠಿತ ರಸ್ತೆಯ ಮಳಿಗೆ ಮುಂಭಾಗದಲ್ಲಿ ಫಾರ್ ರೆಂಟ್, ಟುಲೆಟ್ ನಾಮ ಫಲಕಗಳು ರಾರಾಜಿಸುತ್ತಿವೆ. ಕೊರೊನಾ ಹೊಡೆತಕ್ಕೆ ಮಳಿಗೆ ಮಾಲೀಕರು ನಲುಗಿದ್ದು ಇದರಿಂದಾಗಿ ಕಂಡ ಕಂಡಲ್ಲಿಯೂ ಫಾರ್ ರೆಂಟ್, ಟುಲೆಟ್ ಬೋರ್ಡ್ ಗಳು ಕಾಣುತ್ತಿವೆ. corona-effect-rent-board-mysore

ಲಾಕ್ ಡೌನ್ ನಿಂದ ಈ ಮೊದಲಿದ್ದ ವ್ಯಾಪಾರಸ್ಥರು ಎತ್ತಂಗಡಿ ಮಾಡಲಾಗಿದ್ದು ಇದೀಗ ಕಡಿಮೆ ಬಾಡಿಗೆ ಕೊಡ್ತೀವಿ ಅಂದ್ರೋ ಬರೊವವರು ಯಾರು ಇಲ್ಲ. ಹೀಗಾಗಿ ನಗರದ ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಅಶೋಕ ರಸ್ತೆ ಸೇರಿದಂತೆ ಹಲವೆಡೆ ಮಳಿಗೆಗಳು ಖಾಲಿ ಖಾಲಿಯಾಗಿವೆ.

ಹೊಸ ವ್ಯಾಪಾರಸ್ಥರು ಮಳಿಗೆ ತೆಗೆದುಕೊಂಡು ವ್ಯಾಪಾರ ಉತ್ಸುಕತೆ ತೊರಲು ಹಿಂದೇಟು ಹಾಕುತ್ತಿದ್ದಾರೆ.  ಹಳೇ ವ್ಯಾಪಾರಿಗಳಿಗೆ ಕಡಿಮೆ ಬಾಡಿಗೆಗೆ ಮಳಿಗೆ ಕೊಡ್ತೀವಿ ಅಂದ್ರು, ಕೊರೊನಾ ಸರ್ ಅಂತಾರೆ. ಈ ಮೂಲಕ ಕೊರೋನಾ ಶಾಕ್ ವ್ಯಾಪಾರಸ್ಥರಿಗೂ, ಮಳಿಗೆ ಮಾಲೀಕರಿಗೂ ಇಬ್ಬರಿಗೂ ತಟ್ಟಿದೆ.

Key words: Corona- Effect-Rent board – Mysore.