ದೇಶದಲ್ಲಿ ಕೊರೋನಾ ಏರಿಳಿತ: ಕಳೆದ 24 ಗಂಟೆಗಳಲ್ಲಿ 35,662 ಕೋವಿಡ್ ಪ್ರಕರಣಗಳು ಪತ್ತೆ.

ನವದೆಹಲಿ,ಸೆಪ್ಟಂಬರ್,18,2021(www.justkannada.in): ದೇಶದಲ್ಲಿ ಕೊರೊನಾ ಏರಿಳಿತ ಮುಂದುವರೆದಿದ್ದು  ಕಳೆದ 24 ಗಂಟೆಯಲ್ಲಿ ಹೊಸದಾಗಿ 35,662  ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 281  ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 444529 ಕ್ಕೆ ಏರಿಕೆಯಾಗಿದೆ.

 ಇನ್ನು ದೇಶದಲ್ಲಿ 340639 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಈವರೆಗೆ 3,26,32,222 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ದೇಶದಲ್ಲಿ 14,48,833 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ದೇಶದಲ್ಲಿ ಈವರೆಗೆ 55,07,80,273 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. 24 ಗಂಟೆಯಲ್ಲಿ 2,15,98,046 ಜನರಿಗೆ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ 2.5 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Corona –country-35,662 cases -covid -detected.