ಸಾಂಸ್ಕೃತಿಕ ನಗರಿಯಲ್ಲಿ ಕಂಟ್ರೋಲ್ ತಪ್ಪಿದ ಕೊರೋನಾ: ಸಾವನಪ್ಪಿರುವವರ ಸಂಖ್ಯೆಯಲ್ಲಿ ಮೈಸೂರಿಗೆ 2ನೇ ಸ್ಥಾನ…

Promotion

ಮೈಸೂರು,ಆ,29,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿ ಮೈಸೂರು 2ನೇ ಸ್ಥಾನಕ್ಕೇರಿದೆ. jk-logo-justkannada-logo

ದೇಶದಲ್ಲಿ ಲಾಕ್ ಡೌನ್ ನಿಯಮ ಸಡಿಲ ಮಾಡಿ ಅನ್ ಲಾಕ್  ಮೂಲಕ ಎಲ್ಲಾ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೆ ಕೊರೋನಾ ಮಹಾಮಾರಿ ನಗರ ಪ್ರದೇಶವಲ್ಲದೇ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ.ಅಂತೆಯೇ ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದೆ.  ಈ ನಡುವೆ ಅರಮನೆ ನಗರಿ ಮೈಸೂರಿನಲ್ಲಿ ಕಳೆದ ಐದು ದಿನಗಳಲ್ಲಿ ಸೋಂಕಿತರ ಪ್ರಮಾಣ ಮತ್ತು ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಳವಾಗಿದೆ.

ಕೊರೋನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಇದೀಗ ಕೊರೋನಾ ಸಾವಿನ‌ ಸರಣಿ ಮುಂದುವರೆದಿದ್ದು ಕೇವಲ 5 ದಿನದಲ್ಲಿ 96 ಸೋಂಕಿತರ ಸಾವನ್ನಪ್ಪಿದರೇ, 4105 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆಗಸ್ಟ್ 24ರಂದು 25 ಸಾವು 202 ಪಾಸಿಟಿವ್ ಪ್ರಕರಣ ಕಾಣಿಸಿಕೊಂಡರೇ ಆ.25 ರಂದು ಸೋಂಕಿತರ ಪ್ರಮಾಣ ಸಾವಿರ ಗಡಿ ದಾಟಿತ್ತು. ಅಂದು 1331 ಪಾಸಿಟಿವ್ ಕಾಣಿಸಿಕೊಂಡು 16 ಮಂದಿ ಕೊರೋನಾ ದಿಂದ ಸಾವನ್ನಪ್ಪಿದ್ದರು.

ಇನ್ನು ಆ.26 ರಂದು  20 ಸಾವು 951 ಪಾಸಿಟಿವ್ ಕೇಸ್ ಆ.27 ರಂದು 18 ಸಾವು 895 ಪಾಸಿಟಿವ್ ಹಾಗೆಯೇ ನಿನ್ನೆ 726 ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದ್ದು ಕೊರೋನಾದಿಂದ 17 ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ ಐದು ದಿನಗಳಿಂದ  ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಹಳಿ ತಪ್ಪಿದೆ.corona-control-cultural-city-mysore

ಜಿಲ್ಲೆಯಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ವೇಳೆಯೇ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿದೆ. ನಿನ್ನೆಯಷ್ಟೇ ಡಿಸಿ ಅಭಿರಾಮ್ ಜಿ ಶಂಕರ್ ವರ್ಗಾವಣೆ ಅವರ ಜಾಗಕ್ಕೆ ಶರತ್ ಅವರನ್ನ ನೇಮಕ ಮಾಡಿದೆ. ಹೀಗಾಗಿ ಇದೀಗ ನೂತನ ಜಿಲ್ಲಾಧಿಕಾರಿ ಶರತ್ ಗೆ ಕೊರೊನಾ ಪಾಸಿಟಿವ್ ಕಂಟ್ರೋಲ್  ಮಾಡುವುದೇ ಸವಾಲಿನ ಕೆಲಸವಾಗಿದೆ.

Key words: Corona – Control – Cultural City-mysore