Wednesday, September 30, 2026

BDA Apartments

ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಸಾವು… BDA JK_Adv BDA Adv
Home Crime ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಸಾವು….

ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಸಾವು….

ಮೈಸೂರು.ಆಗಸ್ಟ್,29,2020(www.justkannada.in):   ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಸಾವನ್ನಪ್ಪಿದ್ದಾರೆ.jk-logo-justkannada-logo

ಕಳೆದ ಮೂರು ದಿನಗಳ ಹಿಂದೆ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಸ್ವಾಮಿ ಎಂಬುವವರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಹಾಗೆಯೇ ಇತ್ತೀಚೆಗೆ ಮೇಲಾಧಿಕಾರಿಗಳ ಕಿರುಕುಳ ಆರೋಪ ಮಾಢಿ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿಯಾಗಿದ್ದ ನಾಗೇಂಧ್ರ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದೀಗ ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಸಾವನ್ನಪ್ಪಿದ್ದಾರೆ. ಸಮುದಾಯ ಆರೋಗ್ಯಾಧಿಕಾರಿಯಾಗಿದ್ದ ಚಂದ್ರಶೇಖರ್(32) ಮೃತಪಟ್ಟವರು. ಚಂದ್ರಶೇಖರ್ ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದ ನಿವಾಸಿಯಾಗಿದ್ದು, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ಕೋವಿಡ್ ಸೋಂಕಿತರ ಪತ್ತೆ ತಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರಶೇಖರ್ ನೆನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಿದ್ದರು.another-corona-warrior-death-mysore

ಈ ನಡುವೆ ಚಂದ್ರಶೇಖರ್ ಮನೆಯಲ್ಲಿ ದಿಢೀರ್ ಅಸ್ವಸ್ಥರಾಗಿದ್ದು ತಕ್ಷಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಚಂದ್ರ ಶೇಖರ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕೊರೋನಾ ಟೆಸ್ಟ್ ನಡೆಸಿದ ನಂತರ ಮೃತ ಕೊರೋನಾ ವಾರಿಯರ್ ಚಂದ್ರಶೇಖರ್ ಅಂತ್ಯಕ್ರಿಯೆ ನಡೆಯಲಿದೆ.

Key words: Another- Corona -Warrior -Death – Mysore