ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ: ಇಂದು ಎಲ್ಲಾ ಡಿಸಿಗಳ ಜತೆ ಸಭೆ ನಡೆಸಲಿರುವ ಸಿಎಂ ಬೊಮ್ಮಾಯಿ.

Promotion

ಬೆಂಗಳೂರು,ಜನವರಿ,18,2022(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆ ಇಂದು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಲಿದ್ದಾರೆ.

ವಿಡಿಯೋ ಕಾನ್ಫಿರೆನ್ಸ್ ಮೂಲಕ ಸಭೆ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾವಾರು ಕೋವಿಡ್ ಪರಿಸ್ಥಿತಿ ಕುರಿತು ಚರ್ಚಿಸಲಿದ್ದಾರೆ. ಎಲ್ಲಾ ಜಿಲ್ಲೆಗಳ ವರದಿ ಪರಿಶೀಲನೆ ಮಾಡಲಿದ್ದು, ಜಿಲ್ಲೆಯ ಕೋವಿಡ್ ಕುರಿತ ಮುಂಜಾಗ್ರತಾ ಕ್ರಮಗಳ ಬಗ್ಗೆ ವರದಿ ಸಂಗ್ರಹಿಸಲಿದ್ದಾರೆ.

ಇನ್ನು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಗೆ ಕೋವಿಡ್ ಸೋಂಕು ಹಿನ್ನೆಲೆ, ಇಂದಿನ ಸಿಎಂ ಸಭೆಯಲ್ಲಿ ಬಗಾದಿ ಗೌತಮ್ ಅವರು ಭಾಗಿಯಾಗುವುದು ಅನುಮಾನವಾಗಿದ್ದು ಡಿಸಿ ಬದಲು ಎಡಿಸಿ ಅಥವಾ ಇತರೆ ಅಧಿಕಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.

Key words: Corona- CM -Bommai – meeting – DCs