ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆ: ಎನ್.ಆರ್.ಕ್ಷೇತ್ರದಲ್ಲಿ 3 ಕೋವಿಡ್ ಕೇಂದ್ರ ಆರಂಭ….

Promotion

ಮೈಸೂರು,ಜು,23,2020(www.justkannada.in):  ಮೈಸೂರಿನಲ್ಲಿ ಕೊರೋನಾ  ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಅದರಲ್ಲೂ ಎನ್ ಆರ್ ಕ್ಷೇತ್ರದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದು ಈ  ಹಿನ್ನೆಲೆ ಇಲ್ಲಿ ಮೂರು ಕೋವಿಡ್ ಕೇಂದ್ರಗಳನ್ನ ಆರಂಭ ಮಾಡಲಾಗಿದೆ.jk-logo-justkannada-logo

ಮಾಜಿ ಮೇಯರ್ ಅಯೂಬ್‌ಖಾನ್ ನೇತೃತ್ವದಲ್ಲಿ 3 ಕೋವಿಡ್ ಆರೈಕೆ ಕೇಂದ್ರ ಆರಂಭ ಮಾಡಲಾಗಿದೆ. ಇವು 450 ಹಾಸಿಗೆಗಳುಳ್ಳ‌ ಸೇವಾ ಕೇಂದ್ರಗಳಾಗಿದ್ದು, ಜಿಲ್ಲಾಢಳಿತದಿಂದ ಹಾಸಿಗೆ ಹಾಗು ಔಷಧಿ ನೆರವು ನೀಡಲಾಗುತ್ತದೆ. ಹಾಗೆಯೇ ಮಾಜಿ ಮೇಯರ್ ಆಯೂಬ್ ಖಾನ್ ವೈದ್ಯಕೀಯ ನೆರವು, ಊಟದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.corona-case-increase-3-covid-center-start-mysore-nr-constituency

ಫರೂಕಿಯ ಮಹಿಳೆಯರ ಪಾಲಿಟೆಕ್ನಿಕ್ ಕಾಲೇಜಿನಲ್ಲೂ 150 ಬೆಡ್‌ಗಳ ಕೇಂದ್ರ ಆರಂಭ ಮಾಡಲಾಗಿದೆ.  ಸ್ವಯಂ ಸೇವಕರು, ಎನ್‌ಜಿಓ ಹಾಗೂ ಮೌಲ್ವಿಗಳ ನೆರವಿನೊಂದಿಗೆ ಅಯೂಬ್‌ಖಾನ್ ನೇತೃತ್ವದಲ್ಲಿ ಈ ಹಾರೈಕೆ ಕೇಂದ್ರ ಸ್ಥಾಪನೆ ಮಾಡಲಾಗಿದೆ.

Key words:  Corona case –increase-3 covid center- start –mysore-  NR constituency