ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ: ಇದೊಂದು 2 ಸಾವಿರ ಕೋಟಿ ಹಗರಣ – ದಾಖಲೆ ಬಿಡುಗಡೆ ಮಾಡಿ ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ…

0
249

ಬೆಂಗಳೂರು,ಜು,23,2020(www.justkannada.in): ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಕೊರೋನಾ ಹೆಸರಲ್ಲಿ ರಾಜ್ಯ ಸರ್ಕಾರ ಕೋಟಿ ಕೋಟಿ ಲೂಟಿ ಮಾಡಿದೆ. 2 ಸಾವಿರ ಕೋಟಿ ಸಚಿವರು ಅಧಿಕಾರಿಗಳ ಜೇಬಿಗೆ ಹೋಗಿದೆ. ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಆಗ್ರಹಿಸಿದರು. jk-logo-justkannada-logo

ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಸುದ್ಧಿಗೋಷ್ಠಿ ನಡೆಸಿ ಸರ್ಕಾರದ ವಿರುದ್ದ ದಾಖಲೆ ಬಿಡುಗಡೆ ಮಾಡಿದರು.  ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೊರೋನಾ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ಹಿಂದೆಯೇ ಹೇಳಿದ್ದೆ. ಸರ್ಕಾರದ ಬಳಿ ಈ ಬಗ್ಗೆ ದಾಖಲೆ ಕೇಳಿದ್ರೆ 24 ಗಂಟೆಯಲ್ಲಿ ಕೊಡ್ತೇವೆ ಎಂದಿದ್ದರು. ಆದರೆ ಹಲವು ದಿನಗಳ ನಂತರ ಸಚಿವರು ಸುದ್ದಿಗೋಷ್ಠಿ ನಡೆಸಿ ಆರೋಪ ಸಾಬೀತಾದ್ರೆ ರಾಜೀನಾಮೆ ನೀಡುತ್ತೆನೆ ಎಂದಿದ್ರು.  ನಮ್ಮ ಆರೋಪಕ್ಕೆ ಸರ್ಕಾರದವರು ಉತ್ತರ ನೀಡಿಲ್ಲ ಎಂದು ಕಿಡಿಕಾರಿದರು.covid-kit-rs-2-crore-scam-former-cm-siddaramaiah-release-record

ಕಾಂಗ್ರಸ್ ನಿಂದ ಸುಳ್ಳು ಆರೋಪ ಎಂದು ಹೇಳಿದ್ದಾರೆ.  ಈ ಸಂಬಂಧ ಸಿಎಂ ಮತ್ತು ಅಧಿಕಾರಿಗಳಿಗೆ ಒಟ್ಟು 20 ಪತ್ರ ಬರೆದಿದ್ದೇನೆ. 1 ತಿಂಗಳ ಹಿಂದೆ ಪತ್ರಬರೆದಿದ್ದರೂ ಸೂಕ್ತ ಉತ್ತರ ನೀಡಿಲ್ಲ. ನನ್ನ ಆರೋಪಕ್ಕೆ ಅಲ್ಪಸ್ವಲ್ಪ ಉತ್ತರ ನೀಡಿದ್ದಾರೆ. ನಿಮಗೆ ಪ್ರಾಮಾಣಿಕತೆ ಇದ್ದಿದ್ದರೇ ಜನರಿಗೆ ಉತ್ತರ ನೀಡಬೇಕಿತ್ತು. ನಾವೇ ದಾಖಲೆ ಸಂಗ್ರಹಿಸಿ ಕೇಳಿದ್ರೆ ಸುಳ್ಳು ಎನ್ನುತ್ತಿದ್ದಾರೆ. ಸರ್ಕಾರಕ್ಕೆ ಸಹಕಾರ ನೀಡದೆ ಆರೋಪ ಮಾಡ್ತೀದ್ದಾರೆ ಅಂತಿದ್ದಾರೆ. ಆದರೆ  ಸರ್ಕಾರ ಉತ್ತರ ನೀಡದೇ ಜನರ ದಾರಿ ತಪ್ಪಿಸುತ್ತಿದೆ. ಜನರ ಉಳಿಸಲು ಮಾತ್ರ ನಮ್ಮ ಬೆಂಬಲವಿದೆ. ರಾಜ್ಯ ಸರ್ಕಾರ ಜನ ದ್ರೋಹಿ ಮಾಡುತ್ತಿದೆ. ಕೊರೋನಾ ಹೆಸರಲ್ಲಿ ಲೂಟಿ ಮಾಡುತ್ತಿದೆ. ಇದಕ್ಕೆ ಬೆಂಬಲ ನಾವು ಕೊಡಬೇಕಾ..? ಎಂದು ಪ್ರಶ್ನಿಸಿದರು.

ಸಚಿವರು ಅಧಿಕಾರಿಗಳ ಜೇಬಿಗೆ 2ಸಾವಿರ ಕೋಟಿ…

ಕೊರೋನಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿದೆ. ನನ್ನ ದಾಖಲೆ ಪ್ರಕಾರ  ಆರೋಗ್ಯ ಇಲಾಖೆಯೇ 700 ಕೋಟಿ ಖರ್ಚು ಮಾಡಿದೆ. ವಿವಿಧ ಇಲಾಖೆಗಳು ಜಿಲ್ಲಾಡಳಿತ ಸಹ ಖರ್ಚು ಮಾಡಿದೆ.  ಕೋವಿಡ್ ಕೇರ್ ಕೇಂದ್ರ ಖರ್ಚು ವೆಚ್ಚಕ್ಕೂ ಹಣ ರಿಲೀಸ್ ಮಾಡಲಾಗಿದೆ. 4167 ರೂ ಖರ್ಚು ಮಾಡಲಾಗಿದೆ. ಮಾರ್ಕೆಟ್ ದರಕ್ಕಿಂತ ಹೆಚ್ಚು ಹಣ ನೀಡಿ ಖರೀದಿಸಲಾಗಿದೆ. ಎರಡು ಮೂರು ಪಟ್ಟು ಹಣ ನೀಡಿ ಕೋವಿಡ್ ಉಪಕರಣಗಳ ಖರೀದಿ ಮಾಡಿದೆ.  ಸರ್ಕಾರ ಒಂದು ಪೈಸಕ್ಕೂ ಲೆಕ್ಕ ಕೊಡಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

ಕಾರ್ಮಿಕ ಇಲಾಖೆ ಸಾವಿರ ಕೋಟಿ,  ಜಿಲ್ಲಾಡಳಿತ 700 ಕೋಟಿ, ವೈದ್ಯಕೀಯ ಶಿಕ್ಷಣ ಇಲಾಖೆ 815 ಕೋಟಿ,  ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗ ಇಲಾಖೆ ಸಾವಿರ ಕೋಟಿ ಸೇರಿ ಹಲವು ಇಲಾಖೆಗಳಿಂದ ಖರ್ಚು ಮಾಡಲಾಗಿದೆ. ಈ ನಡುವೆ 2 ಸಾವಿರ ಕೋಟಿ ಅಧಿಕಾರಿ ಸಚಿವರ ಜೋಬಿಗೆ ಹೋಗಿದೆ. 2 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಎಲ್ಲಾ ಆರೋಪಕ್ಕೆ ಸಂಬಂಧಿಸಿದಂತೆ  ದಾಖಲೆ ಬಿಡುಗಡೆ ಮಾಡುತ್ತಿದ್ದೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವುದು ನಾನಲ್ಲ. ನೀವು. ಎಲ್ಲಾ ಫೈಲ್ ಗಳು ನಿಮ್ಮ ಬಳಿಯೇ ಇದೆ. ಕೋಆಪರೇಟ್ ಮಾಡಿ ಅಂತೀರಿ. ಚುನಾಯಿತ ಸರ್ಕಾರವಾಗಿ ಈ ರೀತಿ ಹೇಳಲು ನಾಚಿಕೆಯಾಗಲ್ವೆ.?  ಎಂದು ಸಿದ್ಧರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Key words: covid Kit-Rs 2 crore- scam- Former CM -Siddaramaiah – release-record