ದೇಶದಲ್ಲಿ ಒಂದೇ ದಿನ 34,956 ಮಂದಿಗೆ ವಕ್ಕರಿಸಿದ ಕೊರೋನಾ…

Promotion

ನವದೆಹಲಿ,ಜು,17,2020(www.justkannada.in): ದೇಶದಾದ್ಯಂತ  ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದ್ದು, ಒಂದೇ ದಿನ 34,956 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.jk-logo-justkannada-logo

24 ಗಂಟೆಗಳಲ್ಲಿ 34,956 ಕೊರೋನಾ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 10,03,832ಕ್ಕೆ ಏರಿಕೆಯಾಗಿದೆ. ಒಂದೇ ದಿನ 687 ಮಂದಿ ಕೊರೋನಾಗೆ ಬಲಿಯಾಗಿದ್ದು, ಈವರೆಗೆ ಬಲಿಯಾದವರ ಸಂಖ್ಯೆ 25,602ಕ್ಕೆ ತಲುಪಿದೆ. ಮತ್ತೊಂದೆಡೆ ನಿನ್ನೆ ಒಂದೇ ದಿನ 22987 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.corona-case-34956-single-day-country

ದೇಶದಲ್ಲಿ ಗುಣಮುಖರಾದವರ ಸಂಖ್ಯೆ 6,35,757ಕ್ಕೆ ಏರಿಕೆಯಾಗಿದ್ದು, ಇನ್ನೂ ದೇಶದಲ್ಲಿ 3,42,473 ಸಕ್ರಿಯ ಪ್ರಕರಣಗಳಿವೆ.

Key words: Corona case- -34,956 – single day – country.