ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೋನಾ ಸೋಂಕಿತ ವೃದ್ಧೆ…

ಬೆಂಗಳೂರು,ಜು,17,2020(www.justkannada.in):  ಕೊರೋನಾ ಸೋಂಕಿತ ವೃದ್ಧೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.jk-logo-justkannada-logo

 ಶ್ರೀರಾಂಪುರ ನಿವಾಸಿಯಾಗಿರುವ 60 ವರ್ಷದ ವೃದ್ಧೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ  ಬೆಳಗ್ಗಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದು  ಕೊರೋನಾ ಸೋಂಕಿಗೆ ಹೆದರಿ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.coronavirus-infected-women-committed-suicide-hospital

ಮೃತ ವೃದ್ಧೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಎರಡು ದಿನಗಳಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕೂಡ ಕಂಡು ಬಂದಿತ್ತು. ಹೀಗಾಗಿ  ಇಂದು ವೃದ್ಧೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇತ್ತು. ಆದರೆ ಇಂದು ಬೆಳಿಗ್ಗೆ ಸೋಂಕಿತ ವೃದ್ಧೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

Key words: Coronavirus- infected –women- committed -suicide – hospital.