ಬಿಜೆಪಿ ಪ್ರತಿಭಟನೆ ವೇಳೆ ಕೊರೋನಾ ಬಂದಿಲ್ವಾ..?  ಸಚಿವ ಸುಧಾಕರ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು.

Promotion

ಬೆಂಗಳೂರು,ಜೂನ್,16,2022(www.justkannada.in):  ಇಡಿಯಿಂದ ರಾಹುಲ್ ಗಾಂಧಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಇಂದು ನಡೆಸುತ್ತಿರುವ ರಾಜಭವನ ಚಲೋಗೆ ಆಕ್ರೋಶ ವ್ಯಕ್ತಪಡಿಸಿ ಕೊರೊನಾ ಹೆಚ್ಚಾದರೇ ನೀವೇ ಹೊಣೆ ಎಂದು ಹೇಳಿಕೆ ನೀಡಿದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಸಚಿವ ಸುಧಾಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನಾವು ಬಿಜೆಪಿಯವರನ್ನ ಕೇಳಿ ಪ್ರತಿಭಟನೆ ಮಾಡ್ಬೇಕಾ..? ಬಿಜೆಪಿ ರ್ಯಾಲಿ ವೇಳೆ ಕೊರೋನಾ ಬಂದಿಲ್ವಾ..? ಪ್ರಜಾ ಪ್ರಭುತ್ವ ದಮನ ಮಾಡಿದ್ರೆ ಸುಮ್ಮನಿರಬೇಕಾ…? ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದಿಂಧ ವಿಪಕ್ಷಗಳನ್ನ ಹತ್ತಿಕ್ಕುವ ಕೆಲಸವಾಗುತ್ತಿದೆ. ನಾವು ಅವರ ಯಾವ ಬೆದರಿಕೆಗೂ ಹೆದರುವುದಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: Corona-BJP-protests- Former CM- Siddaramaiah