ಸಹಾಯ ಮಾಡಿದವರ ಮೇಲೆ ಗೌರವವಿಟ್ಟು ಕೆಲಸ ಮಾಡಿದ್ರೆ ಐದು ವರ್ಷ ಮುಂದುವರೆಯಬಹುದು- ಸಿಎಂ ಹೆಚ್.ಡಿಕೆಗೆ ಮಾಜಿ ಶಾಸಕ ಚಲುವರಾಯಸ್ವಾಮಿ ಎಚ್ಚರಿಕೆ…

Promotion

ಮಂಡ್ಯ,ಮೇ,9,2019(www.justkannada.in);  ಸಿಎಂ ಆಗಿ ಮುಂದುವರೆಯುವುದು ಹೆಚ್.ಡಿ ಕುಮಾರಸ್ವಾಮಿ ಅವರ ಕೈಯಲ್ಲೇ ಇದೆ.  ಹೆಚ್.ಡಿಕೆ ನಡವಳಿಕೆಯಲ್ಲೇ ಸಮ್ಮಿಶ್ರ ಸರ್ಕಾರದ ಭವಿಷ್ಯ ಅಡಗಿದೆ. ಸಹಾಯ ಮಾಡಿದವರ ಮೇಲೆ ಗೌರವವಿಟ್ಟು ಕೆಲಸ ಮಾಡಿದ್ರೆ ಐದು ವರ್ಷ ಮುಂದುವರೆಯಬಹುದು  ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಚಲುವರಾಯಸ್ವಾಮಿ, ಸಹಾಯ ಮಾಡುವವರ ಮೇಲೆ ಗೌರವ ಇರಬೇಕು. ಗೌರವ ಇಟ್ಟು ಕೆಲಸ ಮಾಡಿದರೇ ಐದು ವರ್ಷ ಸಿಎಂ ಆಗಿ ಮುಂದುವರೆಯಬಹುದು. ಮಧ್ಯಂತರ ಚುನಾವಣೆ ಮಾಡಲು ಕಾಂಗ್ರೆಸ್ ಯತ್ನಿಸುತ್ತಿಲ್ಲ.  ಆದರೇ ಚುನಾವಣೆ ಘೋಷಿಸೋದು ಕುಮಾರಸ್ವಾಮಿ ಅವರ ಕೈಯಲ್ಲಿದೆ ಎಂದು ಟಾಂಗ್ ಕೊಟ್ಟರು.

ಇನ್ನು ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ,  ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಜಾತ್ಯಾತೀತರಾಗಿ ಪಕ್ಷಾತೀತರಾಗಿ ಎಲ್ಲರೂ ಬಯಸಿದ್ದಾರೆ. ಆದರೇ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಬದಲಿಸಿ ಸಿದ್ದರಾಮಯ್ಯರನ್ನ ಸಿಎಂ ಮಾಡಿ ಎಂದು ಯಾರೂ ಎಲ್ಲಿಯೂ ಹೇಳಿಲ್ಲ ಎಂದರು.

ನಾಲ್ಕು ವರ್ಷಕ್ಕಾಗಲಿ, 2ವರ್ಷಕ್ಕಾಗಲಿ, ಒಂದು ವರ್ಷಕ್ಕಾಗಲಿ ಸಿಎಂ ಆಗಲಿ ಎಂದು ಹೇಳಲ್ಲ. ಮುಂದಿನ ಚುನಾವಣೆಯಲ್ಲಿ  ಸಿಎಂ ಆಗಬೇಕೆನ್ನುವುದರಲ್ಲಿ ತಪ್ಪೇನು..? ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

Key words: Continue -as -CM, HDK – hand-Former MLA- Chaluvaraswamy